ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಪ್ರಾಣಾಂತಕವಾದ ಚಳಿ: ಸಾವಿನ ಸಂಖ್ಯೆ 11ಕ್ಕೆ ಏರಿಕೆ: ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವು - HEAVY COLD IN KASHMIR

ಕಾಶ್ಮೀರದಲ್ಲಿ ಪ್ರಾಣಾಂತಕ ಚಳಿ ಕಾಡುತ್ತಿದೆ. ಈವರೆಗೂ 11 ಮಂದಿ ವಿವಿಧ ಕಾರಣಗಳಿಗೆ ಜೀವ ಕಳೆದುಕೊಂಡಿದ್ದಾರೆ.

ಕಾಶ್ಮೀರದಲ್ಲಿ ಉಂಟಾದ ಹಿಮಪಾತ
ಕಾಶ್ಮೀರದಲ್ಲಿ ಉಂಟಾದ ಹಿಮಪಾತ (ETV Bharat)

By ETV Bharat Karnataka Team

Published : Jan 6, 2025, 9:49 PM IST

ಶ್ರೀನಗರ:ಕಾಶ್ಮೀರದಲ್ಲಿ ತೀವ್ರ ಚಳಿಯು ಪ್ರಾಣಾಂತಕವಾಗಿದೆ. ಶೀತದ ಹೊಡೆತಕ್ಕೆ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಮರಗಟ್ಟುವ ಚಳಿ ಮತ್ತು ಅದರಿಂದ ಕಾಪಾಡಿಕೊಳ್ಳಲು ಹೀಟರ್​ ಬಳಕೆಯಿಂದ ಉಸಿರುಗಟ್ಟಿ ಈವರೆಗೂ 11 ಮಂದಿ ಸಾವಿಗೀಡಾಗಿದ್ದಾರೆ.

ಭಾನುವಾರ ಶ್ರೀನಗರದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ಮೂವರು ಅಪ್ರಾಪ್ತ ಮಕ್ಕಳು, ದಂಪತಿ ಸೇರಿ ಐವರು ಮೃತಪಟ್ಟಿದ್ದಾರೆ. ಕುಟುಂಬದ ಸಾವಿಗೆ ಉಸಿರುಗಟ್ಟುವಿಕೆಯೇ ಕಾರಣ ಎಂದು ಶಂಕಿಸಲಾಗಿದೆ. ಈ ದುರಂತ ಘಟನೆಯು ಕಣಿವೆಯಲ್ಲಿನ ವಿಷಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ.

ಕುಲ್ಗಾಮ್‌ನಲ್ಲಿಯೂ ಇಂಥದ್ದೇ ಘಟನೆ ವರದಿಯಾಗಿದೆ. ನಿಸಾರ್ ಅಹ್ಮದ್ ಖಾನ್ ಎಂಬಾತ ಉಸಿರಾಟ ತೊಂದರೆಗೀಡಾಗಿ ಸಾವನ್ನಪ್ಪಿದ್ದಾನೆ. ಆತನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಳೆದ ತಿಂಗಳು, ಕುಪ್ವಾರದ ಇಬ್ಬರು ಕಾರ್ಮಿಕರಾದ ಪರ್ವೈಜ್ ಅಹ್ಮದ್ ಖಾನ್, ಮೊಹಮ್ಮದ್ ಯೂಸುಫ್ ಖಾನ್ ಶ್ರೀನಗರದ ಕಮರ್ವಾರಿ ಪ್ರದೇಶದಲ್ಲಿ ಮೃತಪಟ್ಟಿದ್ದರು.

ದೋಡಾ ಜಿಲ್ಲೆಯ ಅತಿಥಿ ಗೃಹದಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಡಿಸೆಂಬರ್ 31 ರಂದು ನಡೆದಿತ್ತು. ಅವರಿದ್ದ ಕೋಣೆಯಲ್ಲಿ ಇದ್ದಿಲು ಆಧರಿತ ಹೀಟರ್ ಪತ್ತೆಯಾಗಿತ್ತು. ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿರಬಹುದು ಎಂದು ಅನುಮಾನಿಸಲಾಗಿದೆ.

ಸರ್ಕಾರ ನೆರವು ನೀಡಲಿ:ಇನ್ನು, ಕಣಿವೆಯಲ್ಲಿ ತೀವ್ರ ಚಳಿಗೆ ಜನರು ಅನಿವಾರ್ಯವಾಗಿ ಹೀಟರ್​ಗಳನ್ನು ಬಳಕೆ ಮಾಡುವಂತಾಗಿದೆ. ಇದರಿಂದ ಮನೆಯಲ್ಲಿ ಆಮ್ಲಜನಕ ಪ್ರಮಾಣ ಕುಗ್ಗಿ ಇದು ಜೀವಕ್ಕೂ ಅಪಾಯ ತಂದೊಡ್ಡುತ್ತಿದೆ. ಹೀಗಾಗಿ, ಕಾರ್ಬನ್ ಮೊನಾಕ್ಸೈಡ್ ಪತ್ತೆಗೆ ಸಂವೇದಕ ಯಂತ್ರಗಳನ್ನು (ಸೆನ್ಸಾರ್​) ಸಬ್ಸಿಡಿ ದರದಲ್ಲಿ ಸರ್ಕಾರ ವಿತರಿಸಬೇಕು ಎಂದು ಕಮ್ಯುನಿಸ್ಟ್ ಪಕ್ಷದ ಶಾಸಕ ಮೊಹಮ್ಮದ್ ಯೂಸುಫ್ ತರಿಗಾಮಿ ಅವರು ಮನವಿ ಮಾಡಿದ್ದಾರೆ.

ಈ ಸಂವೇದಕವು ಇಂಗಾಲದ ಮೊನಾಕ್ಸೈಡ್‌ನ ಹೆಚ್ಚುತ್ತಿರುವ ಮಟ್ಟದ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಕೋಣೆಯಲ್ಲಿರುವ ಜನರು ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಮೃತ ಕುಟುಂಬಸ್ಥರಿಗೆ ಮಾನವೀಯ ನೆರವು ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿದ್ದವರಿಗೆ ತಕ್ಷಣಕ್ಕೆ ನೆರವು ಮತ್ತು ಚಿಕಿತ್ಸೆ ಒದಗಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಹೀಟರ್‌ಗಳ ಅತಿಯಾದ ಬಳಕೆಯಿಂದ ಉಸಿರುಕಟ್ಟುವಿಕೆ ಸಂಭವಿಸುತ್ತದೆ ಎಂದು ಆರೋಗ್ಯ ತಜ್ಞರು ಸೂಚಸಿದ್ದಾರೆ. ಏಕೆಂದರೆ ಅವು ಮುಚ್ಚಿದ ಕೋಣೆಯಲ್ಲಿ ಇಂಗಾಲದ ಮೊನಾಕ್ಸೈಡ್ ಅನ್ನು ಹೆಚ್ಚಿಸುತ್ತವೆ. ಇದು ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಆರೋಗ್ಯ ಇಲಾಖೆಯು ಹೀಟರ್‌ಗಳ ಬಳಕೆ ಮತ್ತು ಉಸಿರುಕಟ್ಟುವಿಕೆ ತಡೆಯುವುದು ಹೇಗೆ ಎಂಬುದರ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಕೊರೆಯುವ ಚಳಿ: ಉಸಿರುಗಟ್ಟಿ ದಂಪತಿ, ಮೂವರು ಮಕ್ಕಳು ದುರ್ಮರಣ

ABOUT THE AUTHOR

...view details