ಕರ್ನಾಟಕ

karnataka

ಎನ್​ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಕಾಲಿಗೆರಗಿದ ಚಿರಾಗ್ ಪಾಸ್ವಾನ್​: ವಿಡಿಯೋ

By

Published : Jul 19, 2023, 9:15 AM IST

ಪ್ರಧಾನಿ ಮೋದಿ ಕಾಲಿಗೆ ಎರಗಿದ ಎಲ್​ಜೆಪಿ ನಾಯಕ ಚಿರಾಗ್ ಪಾಸ್ವಾನ್

ನವದೆಹಲಿ:ಇಲ್ಲಿನ ಅಶೋಕ ಹೋಟೆಲ್​ನಲ್ಲಿ ಮಂಗಳವಾರ ನಡೆದ ಎನ್​ಡಿಎ ಸಭೆಯಲ್ಲಿ 39 ಪಕ್ಷಗಳು ಒಗ್ಗೂಡಿ ಬಲಪ್ರದರ್ಶನ ಮಾಡಿದವು. ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಮತ್ತೆ ಹಳೆಯ ಕೂಟಕ್ಕೆ ಸೇರ್ಪಡೆಯಾಗಿದೆ. ಇದರ ರಾಷ್ಟ್ರೀಯ ಅಧ್ಯಕ್ಷ ಮತ್ತು ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಅವರು ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು.

ಸಭೆಗೂ ಮುನ್ನ ಮೋದಿ ಎಲ್ಲ ನಾಯಕರನ್ನು ಮಾತನಾಡಿಸುತ್ತಾ ಕೈ ಕುಲುಕುತ್ತಿದ್ದರು. ಈ ವೇಳೆ ಚಿರಾಗ್ ಪಾಸ್ವಾನ್ ಮೋದಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ಪ್ರಧಾನಿ ಕೂಡ ಅವರನ್ನು ಆಲಿಂಗಿಸಿಕೊಂಡು ಆತ್ಮೀಯವಾಗಿ ಮಾತನಾಡಿಸಿದರು. ಈ ಆಪ್ತ ವಿಡಿಯೋವನ್ನು ಚಿರಾಗ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮೇಲೆ ಪ್ರೀತಿ ತೋರಿದ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚಿರಾಗ್ ಪಾಸ್ವಾನ್ ಸಭೆ ನಡೆಸಿದ್ದರು. ನಂತರ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್​ಡಿಎ) ಸೇರುವುದಾಗಿ ಘೋಷಿಸಿದ್ದರು. ಅದರಂತೆ ನಿನ್ನೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸಲು ಎನ್​ಡಿಎ ಕೂಟ ಅಂಗೀಕರಿಸಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ನೇತೃತ್ವ, ಮೈತ್ರಿ ಸರ್ಕಾರ ರಚನೆ: ಎನ್​ಡಿಎ ನಿರ್ಣಯ

ABOUT THE AUTHOR

...view details