ಕರ್ನಾಟಕ

karnataka

ಸ್ಕಾರ್ಪಿಯೋ ವಾಹನ ಎಳೆದ ಸಿಪಿಐ : ಅಬ್ಬಬ್ಬಾ ಇನ್ಸಪೆಕ್ಟರ್​ ಸಾಹಸ !!!

By

Published : Jun 25, 2021, 12:44 PM IST

Updated : Jun 25, 2021, 1:05 PM IST

ಯಲಬುರ್ಗಾ ಸಿಪಿಐ ನಾಗರಡ್ಡಿ ಅವರು ಸ್ಕಾರ್ಪಿಯೋ ವಾಹನ ಎಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಆಗಿದೆ.

CPI pulled Scorpio vehicle in Koppal
ಸ್ಕಾರ್ಪಿಯೋ ವಾಹನ ಎಳೆದ ಸಿಪಿಐ

ಕೊಪ್ಪಳ :ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ರಥವನ್ನು ಎಳೆಯುವ ರೀತಿಯಲ್ಲಿ ನಗರದಲ್ಲಿ ಸಿಪಿಐ ಒಬ್ಬರು ಬಾಹುಬಲಿ ಸ್ಟೈಲ್ ನಲ್ಲಿ ಕೆಟ್ಟು ನಿಂತ ಸ್ಕಾರ್ಪಿಯೋ ವಾಹನ ರಿಯಲ್ ಆಗಿ ಎಳೆಯುವ ಮೂಲಕ ಗಮನ ಸೆಳೆದಿದ್ದಾರೆ.

ಜಿಲ್ಲೆಯ ಯಲಬುರ್ಗಾ ಸಿಪಿಐ ನಾಗರಡ್ಡಿ ಅವರು ವಾಹನ ಎಳೆದ ವಿಡಿಯೋ ಸಖತ್ ವೈರಲ್ ಆಗಿದೆ. ಕೆಲಸದ ಹಿನ್ನೆಲೆಯಲ್ಲಿ ಸಿಪಿಐ ನಾಗರಡ್ಡಿ ಅವರು ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ವಾಹನ ಕೆಟ್ಟು ನಿಂತಿತ್ತು. ವಾಹನದ ಚಾಲಕ ಮೆಕ್ಯಾನಿಕ್ ನನ್ನು ಕರೆತರಲು ಹೋಗಿದ್ದರು.

ಸ್ಕಾರ್ಪಿಯೋ ವಾಹನ ಎಳೆದ ಸಿಪಿಐ : ಅಬ್ಬಬ್ಬಾ ಇನ್ಸಪೆಕ್ಟರ್​ ಸಾಹಸ !!!

ಈ ವೇಳೆ ಪೊಲೀಸ್ ವಾಹನದಿಂದ ಜನರಿಗೆ ತೊಂದರೆಯಾಗುವ ಸನ್ನಿವೇಶ ಕಂಡು ಬಂದಿದ್ದರಿಂದ ಸಿಪಿಐ ನಾಗರಡ್ಡಿ ಅವರು ಅನಿವಾರ್ಯವಾಗಿ ಸ್ಕಾರ್ಪಿಯೋ ವಾಹನವನ್ನು ಒಬ್ಬರೇ ಎಳೆದಿದ್ದಾರೆ. ಸಿಪಿಐ ನಾಗರಡ್ಡಿ ಅವರು ವಾಹನ ಎಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ : ಮಳೆಯಿಂದ ರಕ್ಷಿಸಿಕೊಳ್ಳಲು ಜೆಸಿಬಿ ಬಕೆಟ್​ ಬಳಸಿಕೊಂಡ ಬೈಕ್‌​ ಸವಾರ: ವಿಡಿಯೋ ನೋಡಿ

Last Updated : Jun 25, 2021, 1:05 PM IST

ABOUT THE AUTHOR

...view details