ಕರ್ನಾಟಕ

karnataka

ಭಾರೀ ಗಾಳಿಗೆ ಧರೆಗುರುಳಿದ 150ಕ್ಕೂ ಹೆಚ್ಚು ಅಡಿಕೆ ಮರಗಳು... ಹಾವೇರಿ ರೈತರು ಕಂಗಾಲು!

By

Published : Apr 18, 2021, 3:08 AM IST

ಹಾವೇರಿ ಜಿಲ್ಲೆಯಲ್ಲಿ ಭಾರೀ ಗಾಳಿಗೆ 150ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುರುಳಿದ್ದು, ರೈತರಿಗೆ ಭಾರೀ ನಷ್ಟ ಸಂಭವಿಸಿದೆ.

150 Nut trees fell down, 150 Nut trees fell down from heavy rain, 150 Nut trees fell down from heavy rain in Haveri, Haveri news, ಧರೆಗುರುಳಿದ 150 ಅಡಿಕೆ ಮರಗಳು, ಹಾವೇರಿಯಲ್ಲಿ ಧರೆಗುರುಳಿದ 150 ಅಡಿಕೆ ಮರಗಳು, ಹಾವೇರಿ ಸುದ್ದಿ, ಹಾವೇರಿ ಮಳೆ ಸುದ್ದಿ,
ಭಾರೀ ಗಾಳಿಗೆ ಧರೆಗುರುಳಿದ 150ಕ್ಕೂ ಹೆಚ್ಚು ಅಡಿಕೆ ಮರಗಳು

ಹಾವೇರಿ :ಭಾರಿ ಗಾಳಿಗೆ 150 ಕ್ಕೂ ಅಧಿಕ ಅಡಿಕೆ ಮರಗಳು ಧರೆಗುರುಳಿದ ಘಟನೆ ರಟ್ಟಿಹಳ್ಳಿ ತಾಲೂಕಿನ ಚಿಕ್ಕಮೊರಬ ಗ್ರಾಮದಲ್ಲಿ ನಡೆದಿದೆ.

ಭಾರೀ ಗಾಳಿಗೆ ಧರೆಗುರುಳಿದ 150ಕ್ಕೂ ಹೆಚ್ಚು ಅಡಿಕೆ ಮರಗಳು

ಗ್ರಾಮದ ಶಿವನಗೌಡ ಮಲಗಿನಹಳ್ಳಿ ಮತ್ತು ಬಸನಗೌಡ ಮಲಗಿನಹಳ್ಳಿ ಎಂಬ ರೈತರಿಗೆ ಸೇರಿದ ಅಡಿಕೆ ತೋಟಗಳಲ್ಲಿ ಈ ಹಾನಿ ಸಂಭವಿಸಿದೆ. ರೈತರಿಬ್ಬರ ತೋಟದಲ್ಲಿ ಬೆಳೆದಿದ್ದ ಅಡಿಕೆ ಮರಗಳು ಧರೆಗುರುಳಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಭಾರೀ ಗಾಳಿಗೆ ಧರೆಗುರುಳಿದ 150ಕ್ಕೂ ಹೆಚ್ಚು ಅಡಿಕೆ ಮರಗಳು

ಗಿಡ ನೆಟ್ಟು ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಮರಗಳು ಇನ್ನೇನು ಫಸಲು ನೀಡಲಾರಂಭಿಸುತ್ತಿದ್ದಂತೆ ಈ ರೀತಿಯಾಗಿರುವದು ರೈತರಿಗೆ ಇನ್ನಿಲ್ಲದ ಅಘಾತತಂದಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಕಡೆ ಭೇಟಿ ನೀಡಿ ತಮಗಾದ ಹಾನಿಗೆ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

ಭಾರೀ ಗಾಳಿಗೆ ಧರೆಗುರುಳಿದ 150ಕ್ಕೂ ಹೆಚ್ಚು ಅಡಿಕೆ ಮರಗಳು

ABOUT THE AUTHOR

...view details