ಕರ್ನಾಟಕ

karnataka

ಹುಬ್ಬಳ್ಳಿಯಲ್ಲಿ ಅನಂತನಾಗ್ ಅವರಿಂದ ಕೇಕ್ ಕತ್ತರಿಸಿ ಶಂಕರನಾಗ್ ಹುಟ್ಟು ಹಬ್ಬ ಆಚರಣೆ

By

Published : Nov 10, 2021, 3:15 AM IST

ಶಂಕರ ನಾಗ್ ಅವರು ನಮ್ಮನ್ನು ಅಗಲಿ 2 ದಶಕಗಳೇ ಕಳೆದಿದ್ದರು ಅವರ ನೆನಪು ಮಾತ್ರ ಇನ್ನು ಮಾಸಿಲ್ಲ. ಅದರಂತೆಯೇ ಇಂದು ಭಜರಂಗದಳ, ವಿಶ್ವ ಹಿಂದು ಪರಿಷತ್ ಹಾಗೂ ಕಿಮ್ಸ್ ಆಟೋ ಚಾಲಕರ ಸಂಘದ ವತಿಯಿಂದ ಇಲ್ಲಿನ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಲಾಯಿತು.

Shankar nag Birthday  Celebration
ಶಂಕರ್​ನಾಗ್ ಜನ್ಮದಿನ ಆಚರಣೆ

ಹುಬ್ಬಳ್ಳಿ: ಕರಾಟೆ ಕಿಂಗ್ ಶಂಕರನಾಗ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಶಂಕರನಾಗ್ ಸಹೋದರ ಅನಂತನಾಗ್ ಅವರು ಆಟೋ ಚಾಲಕರ ಜೊತೆಗೂಡಿ ಕೇಕ್ ಕತ್ತರಿಸಿ 67 ನೇ ಹುಟ್ಟು ಹಬ್ಬ ಆಚರಿಸಿದರು.

ಶಂಕರ ನಾಗ್ ಅವರು ನಮ್ಮನ್ನು ಅಗಲಿ 2 ದಶಕಗಳೇ ಕಳೆದಿದ್ದರು ಅವರ ನೆನಪು ಮಾತ್ರ ಇನ್ನು ಮಾಸಿಲ್ಲ. ಅದರಂತೆಯೇ ಇಂದು ಭಜರಂಗದಳ, ವಿಶ್ವ ಹಿಂದು ಪರಿಷತ್ ಹಾಗೂ ಕಿಮ್ಸ್ ಆಟೋ ಚಾಲಕರ ಸಂಘದ ವತಿಯಿಂದ ಇಲ್ಲಿನ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಲಾಯಿತು.

ಶಂಕರನಾಗ್ ಅವರ ಸಹೋದರ ಹಾಗೂ ಹಿರಿಯ ನಟ ಅನಂತನಾಗ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕೇಕ್ ಕತ್ತರಿಸುವ ಮೂಲಕ ಜನುಮ ದಿನದ ಆಚರಣೆಗೆ ಮೆರುಗು ನೀಡಿದರು. ಶಂಕರನಾಗ್ ತಿರಿಕೊಂಡು 20 ವರ್ಷಗಳು ಕಳೆದರೂ ಸಹ, ಅವರ ಅಭಿಮಾನಿಗಳು ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ನನಗೆ ಖುಷಿ ತಂದಿದೆ. ಜೊತೆಗೆ ಹುಬ್ಬಳ್ಳಿಯಲ್ಲಿ ಎಲ್ಲರನ್ನೂ ಭೇಟಿ ಮಾಡಿದ್ದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೂ ಇತ್ತೀಚಿಗೆ ಅಗಲಿದ ಪುನೀತ್ ರಾಜಕುಮಾರ ಅವರನ್ನು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶ್ರೀಧರ ಹಳ್ಳಿ, ಬಜರಂಗದಳ ಜಿಲ್ಲಾ ಸಂಚಾಲಕರಾದ ಶಿವಾನಂದ ಸತ್ತಿಗೇರಿ, ವಿಶ್ವಹಿಂದು ಪರಿಷದ್ ಪ್ರಮುಖರಾದ ತೋಟಪ್ಪ, ಆಟೋ ಚಾಲಕರಾದ ಖಂಡೋಬಾ ಕಳಸನ್ನವರ, ಮಂಜುನಾಥ್, ಮಲ್ಲಿಕಾರ್ಜುನ ಸತ್ತಿಗೇರಿ ಸೇರಿದಂತೆ ಮುಂತಾದವರು ಇದ್ದರು.

ಇದನ್ನು ಓದಿ:ಅರಮನೆ ಮೈದಾನದಲ್ಲಿ ಸಾವಿರಾರು ಮಂದಿಗೆ ಅನ್ನದಾನ: ಪುನೀತ್‌ ಬಯಕೆ ಈಡೇರಿತು!

ABOUT THE AUTHOR

...view details