ಕರ್ನಾಟಕ

karnataka

ರಾಜ್ಯ ಒಳ್ಳೆಯದಾಗಬೇಕೆಂದ್ರೆ ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು  ಜನರ ಬಯಕೆ: ಜಮೀರ್ ಪುನರುಚ್ಛಾರ

By

Published : Jul 23, 2022, 3:50 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಮಧ್ಯೆ ಟಾಕ್ ಫೈಟ್, ಮುಂದುವರೆದಿದೆ. ಮುಖ್ಯಮಂತ್ರಿ ವಿವಾದವನ್ನು ಮೊದಲು ಹುಟ್ಟು ಹಾಕಿರೋದು ಯಾರೆಂದು ಜಮೀರ್​ ಪ್ರಶ್ನೆ ಮಾಡಿದ್ದಾರೆ..

peoples-wish-is-that-siddaramaiah-should-become-the-cm-again-says-congress-mla-zameer-ahmed
ರಾಜ್ಯ ಒಳ್ಳೆಯದಾಗಬೇಕೆಂದ್ರೆ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಜನರ ಬಯಕೆ: ಜಮೀರ್ ಪುನರುಚ್ಚಾರ

ಬೆಳಗಾವಿ: ಮುಂದಿನ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್​ ತೀರ್ಮಾನಿಸುತ್ತದೆ. ನಾವು ಯಾರೂ ತೀರ್ಮಾನ ಮಾಡಕ್ಕಾಗಲ್ಲ. ರಾಜ್ಯ ಒಳ್ಳೆಯದಾಗಬೇಕೆಂದರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಬಯಸುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್‌ ಹೇಳಿದರು.

ನಗರದಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ನನ್ನ ಅಭಿಪ್ರಾಯ ಹೇಳಿದ್ದೇನೆ. ನನ್ನ ಅಭಿಪ್ರಾಯ ಹೇಳೋದು ತಪ್ಪೇನಿಲ್ಲಲ್ಲ. ಮೊನ್ನೆ ನಾನು ಹೇಳಿದೀನಿ ಮುಸ್ಲಿಂರಿಗೂ ಅವಕಾಶ ಸಿಗಬೇಕು. ನಾವು ಜನ ಸಂಖ್ಯೆಯನುಸಾರ ಶೇ.15ರಷ್ಟು ಇದ್ದೇವೆ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಆದರೆ, ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಅವರು ಯಾರು ಸಿಎಂ ಆಗಬೇಕೆಂದು ತೀರ್ಮಾನ ಮಾಡುತ್ತಿದ್ದಾರೆ ಎಂದರು.

ಸಿಎಂ ವಿಚಾರದ ಕುರಿತು ಯಾರೇ ಇದ್ದರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆ ಪ್ರತಿಕ್ರಿಯಿಸಿದ ಜಮೀರ್​, ಇದನ್ನು ಚಾಲನೆ ಯಾರು ಕೊಟ್ಟಿದ್ದು?, ಅವರು ಹೇಳಿದ್ಮೇಲೆ ತಾನೇ ಬಂದಿದ್ದು. ಅಧ್ಯಕ್ಷರು ನಮ್ಮ ಒಕ್ಕಲಿಗ ಸಮಾಜ ಕಾರ್ಯಕ್ರಮದಲ್ಲಿ ಅವರಾಗಿ ಅವರು ನನಗೆ ಮುಂದೆ ಅವಕಾಶ ಕೊಡಿ ಎಂದು ಚಾಲನೆ ಕೊಟ್ಟಿದ್ದಾರೆ. ಕೇಳಿದ್ದು ಅವರೇ ತಾನೇ?. ಅವರು ಹೇಳಿದ ಮೇಲೆ ನಾವು ಹೇಳಿದ್ದು, ಅದಕ್ಕಿಂತ ಮುಂಚೆ ಯಾರು ಹೇಳಿಲ್ಲ ಎಂದು ಹೇಳಿದರು.

ರಾಜ್ಯ ಒಳ್ಳೆಯದಾಗಬೇಕೆಂದ್ರೆ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಜನರ ಬಯಕೆ: ಜಮೀರ್ ಪುನರುಚ್ಚಾರ

ಸಮಾಜ ಮತ ಕೊಟ್ಟರೇ ಸಿಎಂ ಆಗಲು:ಎಲ್ಲರಿಗೂ ಆಸೆ ಇರುತ್ತದೆ. ಬಹಳ ಜನರಿಗೆ ಆಸೆ ಇದೆ. ಆಸೆ ಇರೋದ್ರಲ್ಲಿ ತಪ್ಪೇನಿಲ್ಲ. ಒಂದೇ ಸಮಾಜ ಮತ ಕೊಟ್ಟರೇ ಸಿಎಂ ಆಗಲು ಸಾಧ್ಯವಾಗಲ್ಲ. ಎಲ್ಲ ಸಮಾಜದವರನ್ನು ನಾವು ಜೊತೆಗೆ ತಗೆದುಕೊಂಡು ಹೋಗಬೇಕು. ಎಲ್ಲ ಸಮಾಜ ಸೇರಿ ಆಶೀರ್ವಾದ ಮಾಡಿದ್ರೆ ಸರ್ಕಾರ ಬರಲು ಸಾಧ್ಯವಾಗಲಿದೆ. ಬರೀ ಒಂದು ಸಮಾಜ ಬೆಂಬಲ ಕೊಟ್ಟರೆ, ಯಾರು ಸಿಎಂ ಆಗಲು ಸಾಧ್ಯವಾಗಲ್ಲ ಎಂದೂ ಅಭಿಪ್ರಾಯ ಪಟ್ಟರು.

ಅಲ್ಲದೇ, ವ್ಯಕ್ತಿ ಪೂಜೆ ಮಾಡಬಾರದು ಪಕ್ಷ ಪೂಜೆ ಮಾಡಬೇಕೆಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ, ಪಕ್ಷ ಪೂಜೆ ಮಾಡ್ತಿದೀವಿ, ಅದರ ಜೊತೆ ವ್ಯಕ್ತಿ ಪೂಜೆ ಮಾಡಬೇಕಾಗುತ್ತದೆ. ಡಿಕೆಶಿ ಭೇಟಿಯಾಗ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ಖಂಡಿತವಾಗಿ, ಅವರು ನಮ್ಮ ಅಧ್ಯಕ್ಷರು ಇದ್ದಾರೆ. ಅವರನ್ನು ಬಿಟ್ಟು ಬಿಜೆಪಿ ಅಧ್ಯಕ್ಷ ಕಟೀಲ್​ರನ್ನು ಭೇಟಿ ಮಾಡಕ್ಕಾಗುತ್ತಾ?. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗುತ್ತೇನೆ. 'ಬಾಯಿಮುಚ್ಚು' ಅಂತಾ ವೈಯಕ್ತಿಕವಾಗಿ ನನಗೆ ಹೇಳಿದ್ದಾರಾ?. ನಾನು ಅವರ ಹೇಳಿಕೆ ನೋಡಿದ್ದೇನೆ. ಎಲ್ಲ ಜನ ಸೇರಿ‌ ಪಕ್ಷ ಅಧಿಕಾರಕ್ಕೆ ತರಬೇಕು ಅಂದಿದ್ದಾರೆ ಎಂದು ತಿಳಿಸಿದರು.

ಜನ ಮತ ಕೊಟ್ರೆ ಅಧಿಕಾರ ಬರಲು ಸಾಧ್ಯ: ಡಿಕೆಶಿ ಅವರ ಲೆವೆಲ್ ದೊಡ್ಡದಿರಬಹುದು, ನನ್ನ ಲೆವೆಲ್ ಚಿಕ್ಕದೇ ಇರಬಹುದು. ಅವರೇ, ದೊಡ್ಡವರಾಗಲಿ. ಇದನ್ನು ನನ್ನ ಪಕ್ಷ ತೀರ್ಮಾನ ಮಾಡಬೇಕು. ನನ್ನ ಅಭಿಪ್ರಾಯ ಹೇಳಿದ್ದೇನೆ. ರಾಜ್ಯದ ಅಭಿಪ್ರಾಯ ಹೇಳಿದ್ದೇನೆ. ರಾಜ್ಯ ಪ್ರವಾಸ ಮಾಡ್ತಿದೀನಿ, ಎಷ್ಟು ಜನ ಇದ್ದಾರೆ ಎಲ್ಲರನ್ನೂ ಕೇಳಿ. ಸಿದ್ದರಾಮಯ್ಯ 2013ರಿಂದ 2018ರವರೆಗೂ ಉತ್ತಮ ಆಡಳಿತ ಕೊಟ್ಟಿದ್ದಾರೆ. ಮತ್ತೆ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ ಎಂದು ಪುನರುಚ್ಚರಿಸಿದರು.

ಸಿದ್ದರಾಮಯ್ಯ ಕೊಟ್ಟ ಕಾರ್ಯಕ್ರಮ ಇವತ್ತು ಜನ ನೆನೆಸುತ್ತಿದ್ದಾರೆ. ರಾಜ್ಯ ಒಳ್ಳೆಯದಾಗಬೇಕೆಂದರೆ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾ ಜನರು ಬಯಸುತ್ತಿದ್ದಾರೆ. ಜನ ಮತ ಕೊಟ್ರೆ ಅಧಿಕಾರ ಬರಲು ಸಾಧ್ಯ. ನಾವು, ನೀವು ಯಾರೂ ತೀರ್ಮಾನ ಮಾಡಕ್ಕಾಗಲ್ಲ. ಡಿ.ಕೆ.ಶಿವಕುಮಾರ್ ಸಹ ಮಾಡಕ್ಕಾಗಲ್ಲ. ನಾನು ಸಹ ಮಾಡಕ್ಕಾಗಲ್ಲ. ಪಕ್ಷದಲ್ಲಿ ಅಲ್ಪಸಂಖ್ಯಾತರ ಕಡೆಗಣಿಸುತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್​ ಅಧಿಕಾರಕ್ಕೆ ತರಲು ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ: ಡಿಕೆಶಿ ಖಡಕ್​ ಸಂದೇಶ

ABOUT THE AUTHOR

...view details