ಕರ್ನಾಟಕ

karnataka

ಆಧಾರ ಕಾರ್ಡ್ ಇಲ್ಲದೇ ಸರ್ಕಾರಿ ಸೌಲಭ್ಯ ವಂಚಿತನಾದ ದಿವ್ಯಾಂಗ ವ್ಯಕ್ತಿ

By

Published : Mar 6, 2020, 11:42 PM IST

Updated : Mar 7, 2020, 11:09 AM IST

ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದಲ್ಲಿ ಶೇ 90% ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿ ಆಧಾರ್ ಕಾರ್ಡ್ ಇಲ್ಲದ ಕಾರಣ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

disabled-persons-deprived-of-government-facility-without-aadhaar-card
ಆಧಾರ ಕಾರ್ಡ ಇಲ್ಲದೇ ಸರ್ಕಾರಿ ಸೌಲಭ್ಯ ವಂಚಿತನಾದ ಅಂಗವಿಕಲ

ಚಿಕ್ಕೋಡಿ: ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಾದಲ್ಲಿ ಆಧಾರ್ ಕಾರ್ಡ್ ಕಡ್ಡಾಯ. ಆದರೆ, ಸದಲಗಾ ಪಟ್ಟಣದ ಅಪ್ಪಾಸಾಬ ಅಂಕಲಿ ಅವರು ಟ್ರ್ಯಾಕ್ಟರ್ ಡ್ರೈವರ್ ಆಗಿದ್ದು, ಇವರ ಮಗ ಅಮೀತ ಅಂಕಲಿ (27) ಎಂಬವರು ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಸರ್ಕಾರಿ ಸೌಲಭ್ಯ ವಂಚಿತನಾದ ದಿವ್ಯಾಂಗ ವ್ಯಕ್ತಿ

ಅಂಕಲಿ ಕಡು ಬಡತನದಲ್ಲಿದ್ದು, ಮಗ ಅಂಗವಿಕಲ. ಇನ್ನು ಇವರಿಗೆ ಮಗಳಿದ್ದು, ಆಕೆಯ ವಿವಾಹವಾಗಿದೆ. ಮಗ ಅಂಗವೈಕಲ್ಯದಿಂದ ಬಳಲುತ್ತಿದ್ದರಿಂದ ತಾಯಿ ಹೌಸಾಬಾಯಿ ಅಪ್ಪಾಸಾಬ ಅಂಕಲಿ ಅವರು ಮನೆಯಲ್ಲಿದ್ದು, ಮನೆಕೆಲಸ ಮಾಡುತ್ತಾ ಮಗನ ಸೇವೆ ಮಾಡಬೇಕಾಗಿದೆ. ಹೀಗಾಗಿ ತಾಯಿಗೆ ಕೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ಕುಟುಂಬಕ್ಕೆ ಆಸರೆಯಾಗಬೇಕಾದ ಮಗನಿಗೆ ಅಂಗವೈಕಲ್ಯತೆ ಕಾಡಿದೆ. ಇದರ ಜೊತೆ ಅಮೀತಗೆ ಸರ್ಕಾರಿ ಸೌಲಭ್ಯಯೂ ಸರಿಯಾಗಿ ದೊರಕದೆ ವಂಚಿತರಾಗಿದ್ದಾರೆ.

ಆಧಾರ ಕಾರ್ಡ ಇಲ್ಲದೇ ಸರ್ಕಾರಿ ಸೌಲಭ್ಯ ವಂಚಿತನಾದ ಅಂಗವಿಕಲ

ಆಧಾರ್ ಕಾರ್ಡ್ ಇಲ್ಲದ್ದರಿಂದ ಸೌಲಭ್ಯಗಳು ಸಿಗದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೇವಲ ತಿಂಗಳಿಗೆ 600 ರೂಪಾಯಿ ಮಾಸಾಶನ ಬರುತ್ತದೆ. ಶೇ 90% ರಷ್ಟು ಅಂಗವಿಕಲತೆಯಿಂದ ಬಳಲುತ್ತಿರುವ ಅಮೀತ ಅಂಕಲಿ ಅವರಿಗೆ ಆಧಾರ್​ ಕಾರ್ಡ್​ ನೀಡಿ ಸರ್ಕಾರದಿಂದ ಬರುವ ಸೌಲಭ್ಯವನ್ನು ದೊರಕಿಸಿ ಕೊಡಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.

Last Updated : Mar 7, 2020, 11:09 AM IST

ABOUT THE AUTHOR

...view details