ಕರ್ನಾಟಕ

karnataka

ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಅನುಮಾನಾಸ್ಪದ ಘಟನೆಗಳು: ತನಿಖೆಗೆ ಮುಂದಾದ ಡಿಸಿಪಿ ಶಶಿಕುಮಾರ್​​

By

Published : Jul 23, 2020, 12:37 PM IST

Updated : Jul 23, 2020, 1:37 PM IST

ಕಳೆದೆರಡು ವಾರದಲ್ಲಿ ಕೊರೊನಾ ಸೋಂಕಿತ ಇಬ್ಬರು ಮಹಿಳೆಯರು ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಹಾಗೆಯೇ ನಿನ್ನೆ ಮಹಿಳೆಯೋರ್ವಳಿಗೆ ಚಿಕಿತ್ಸೆ ನೀಡಲು ಐಸಿಯು ಇಲ್ಲದೆ ಸರಿಯಾದ ಚಿಕಿತ್ಸೆ ಸಿಗದೆ ಮಹಿಳೆ ಸಾವನ್ನಪ್ಪಿದ್ದರು. ಈ ವೇಳೆ ಸೋಂಕಿತರ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆಯುತ್ತಿವೆ ಅನುಮಾನಸ್ಪದ ಘಟನೆಗಳು
ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆಯುತ್ತಿವೆ ಅನುಮಾನಸ್ಪದ ಘಟನೆಗಳು

ಬೆಂಗಳೂರು: ಕೆ.ಸಿ ಜನರಲ್ ಆಸ್ಪತ್ರೆಯು ಕೋವಿಡ್ ಆಸ್ಪತ್ರೆಯಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿಡುತ್ತಿದೆ. ಆದರೆ ಇತ್ತಿಚ್ಚೆಗೆ ಕೆ.ಸಿ ಜನರ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಒಂದೊಂದು ಘಟನಾವಳಿಗಳು ಹಲವು ಅನುಮಾನ ಮೂಡಿಸಿವೆ.

ಕಳೆದೆರಡು ವಾರದಲ್ಲಿ ಕೊರೊನಾ ಸೋಂಕಿತ ಇಬ್ಬರು ಮಹಿಳೆಯರು ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಹಾಗೆ ನಿನ್ನೆ ಮಹಿಳೆಯೋರ್ವಳಿಗೆ ಚಿಕಿತ್ಸೆ ನೀಡಲು ಐಸಿಯು ಇಲ್ಲದೆ ಸರಿಯಾದ ಚಿಕಿತ್ಸೆ ಸಿಗದೆ ಮಹಿಳೆ ಸಾವನ್ನಪ್ಪಿದ್ದರು. ಈ ವೇಳೆ ಸೋಂಕಿತರ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

ಸದ್ಯ ಕೆ.ಸಿ ‌ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದ ಮೂರು ಪ್ರಕರಣ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹೀಗಾಗಿ ಸದ್ಯ ಸ್ವತಃ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಆಸ್ಪತ್ರೆಗೆ ಸಂಬಂಧಿಸಿದ ತನಿಖೆಗೆ ಇಳಿದಿದ್ದಾರೆ. ಆಸ್ಪತ್ರೆಯಲ್ಲಿ ನಿಜಾವಾಗಾಲು ಏನು ನಡಿತಿದೆ? ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಯಾವ ರೀತಿ ಸೇವೆ ಸಲ್ಲಿಸುತ್ತಿದ್ದಾರೆ? ಹೀಗೆ ಪ್ರತಿಯೊಂದರ ಮಾಹಿತಿ ಕಲೆಹಾಕುತ್ತಿದ್ದಾರೆ.

ನಿನ್ನೆ ಕೂಡ ರೋಗಿ ಕುಟುಂಬಸ್ಥರು ಮಹಿಳೆಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಗಲಾಟೆ ಮಾಡಿದ್ದರು. ಈ ವೇಳೆ ಡಿಸಿಪಿ ಶಶಿಕುಮಾರ್, ಡಿಸಿಎಂ ಅಶ್ವತ್ಥ್​​ ನಾರಯಣ ಕೂಡ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಕಲೆ‌ಹಾಕಿದ್ದರು. ಸದ್ಯ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ನಡೆಯುವ ಸಂಪೂರ್ಣ ಚಿಕಿತ್ಸಾ ಸೌಲಭ್ಯಗಳ ಕುರಿತು ಡಿಸಿಪಿ ತನಿಖೆಗೆ ಇಳಿದಿದ್ದಾರೆ.

Last Updated : Jul 23, 2020, 1:37 PM IST

ABOUT THE AUTHOR

...view details