ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಿದ್ದು, ಹೊಸ ಹೊಸ ಪ್ರತಿಭೆಗಳು ಕಣಕ್ಕಿಳಿದು ತಮ್ಮ ಸಾಮರ್ಥ್ಯ ಹೊರ ಹಾಕುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅಡುವ ಅವಕಾಶ ಪಡೆದುಕೊಂಡಿರುವ 22 ವರ್ಷದ ಸೌರಾಷ್ಟ್ರ ಎಡಗೈ ವೇಗಿ ಚೇತನ ಸಕಾರಿಯಾ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ.
ಪಂಜಾಬ್ ವಿರುದ್ಧ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4 ಓವರ್ ಎಸೆದ ಚೇತನ್ ಕೇವಲ 31ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಇಂದಿನ ಪಂದ್ಯದಲ್ಲಿ ಕನ್ನಡಿಗರಾದ ಮಯಾಂಕ್ ಅಗರವಾಲ್, ಕೆ.ಎಲ್ ರಾಹುಲ್ ಹಾಗೂ ರಿಚರ್ಡ್ಸಸನ್ ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಇದರ ಜತೆಗೆ ಕ್ಷೇತ್ರ ರಕ್ಷಣೆ ವೇಳೆ ಅದ್ಭುತ ಕ್ಯಾಚ್ ಪಡೆದುಕೊಳ್ಳುವ ಮೂಲಕ ನಿಕೋಲಸ್ ಪೂರನ್ ಔಟ್ ಆಗಲು ಕಾರಣರಾದರು.