ಚೆನ್ನೈ (ತವಿಳುನಾಡು): ಚೆನ್ನೈನ ಐದು ಬ್ಯಾಟರ್ಗಳ ಸಮತೋಲನದ ಆಟದ ಪ್ರದರ್ಶನದಿಂದ ವಿಕೆಟ್ ನಷ್ಟದ ನಡುವೆಯೂ ಮುಂಬೈ ಇಂಡಿಯನ್ಸ್ ನೀಡಿದ್ದ 140 ರನ್ ಸಾಧಾರಣ ಗುರಿಯನ್ನು 17.4 ಓವರ್ನಲ್ಲಿ ಸಾಧಿಸಿದೆ. ಈ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ಗಳನ್ನು ಕಳೆದುಕೊಂಡಿತು. ಕಾನ್ವೆ, ಗಾಯಕ್ವಾಡ್, ದುಬೆ ರೆಹಾನೆಯ ಸಮಯೋಚಿನ ರನ್ 6 ವಿಕೆಟ್ಗಳ ಗೆಲುವನ್ನು ಚೆನ್ನೈಗೆ ಪಡೆಯಿತು.
ಚೆನ್ನೈನ ಆರಂಭಿಕ ಆಟಗಾರರಾದ ಕಾನ್ವೆ ಮತ್ತು ಗಾಯಕ್ವಾಡ್ ತಮ್ಮ ಫಾರ್ಮ್ನ್ನು ಈ ಪಂದ್ಯದಲ್ಲೂ ಮುಂದುವರೆಸಿದರು. ಈ ಜೋಡಿ ಮೊದಲ ವಿಕೆಟ್ಗೆ 46 ರನ್ ಸೇರಿಸಿತು. 16 ಬಾಲ್ನಲ್ಲಿ 2 ಸಿಕ್ಸ್ ಮತ್ತು 4 ಬೌಂಡರಿಯಿಂದ 30 ರನ್ ಗಳಿಸಿ ಆಡುತ್ತಿದ್ದ ಗಾಯಕ್ವಾಡ್ ಅನುಭವಿ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಹಾನೆಯೂ ಬಿರುಸಿನ ಇನ್ನಿಂಗ್ಸ್ ಕಟ್ಟಿದರು. 17 ಎಸೆತದಲ್ಲಿ 21 ರನ್ಗಳಿಸಿದ ಔಟ್ ಆದರು. ನಂತರ ಬಂದ ಅಂಬಟಿ ರಾಯುಡು 12 ರನ್ಗೆ ವಿಕೆಟ್ ಕೊಟ್ಟರು.
ಇಷ್ಟು ವಿಕೆಟ್ ಪತನದ ನಡುವೆ ಆರಂಭಿಕರಾಗಿ ಬಂದಿದ್ದ ಕಾನ್ವೆ ನಿಧಾನ ಗತಿಯಲ್ಲಿ ರನ್ ಗಳಿಸುತ್ತಾ ವಿಕೆಟ್ ಕಾದರು. ಕಾನ್ವೆ ಈ ಇನ್ನಿಂಗ್ಸ್ನಲ್ಲಿ 42 ಬಾಲ್ ಎದುರಿಸಿ 4 ಫೋರ್ನಿಂದ 44 ರನ್ ಕಲೆಹಾಕಿ ಗೆಲುವಿಗೆ 10 ರನ್ ಬಾಕಿ ಇರುವಂತೆ ವಿಕೆಟ್ ಕೊಟ್ಟರು. ಶಿವಂ ದುಬೆ ತಮ್ಮ ಎಂದಿನ ಫಾರ್ಮ್ ಮುಂದುವರೆಸಿ 18 ಬಾಲ್ನಲ್ಲಿ 3 ಸಿಕ್ಸ್ನಿಂದ ಅಜೇಯ 26 ರನ್ ಕಲೆಹಾಕಿದರು. ಕೊನೆಗೆ ಬಂದಿದ್ದ ಧೋನಿ 3 ಬಾಲ್ ಎದುರಿಸಿ 2 ರನ್ ಗಳಿಸಿದರು. ಮುಂಬೈ ಪರ ಪಿಯೂಷ್ ಚಾವ್ಲಾ 2, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಆಕಾಶ್ ಮಧ್ವಲ್ ತಲಾ ಒಂದು ವಿಕೆಟ್ ಪಡೆದರು.
ಮುಂಬೈ ಇನ್ನಿಂಗ್ಸ್:ಇದಕ್ಕೂ ಮುನ್ನ ನೆಹಾಲ್ ವಾಧೇರಾ ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ. ರೋಹಿತ್ ಪಡೆಯ ಆರಂಭಿಕರ ವೈಫಲ್ಯದ ನಡುವೆಯೂ, ಮಧ್ಯಮ ಕ್ರಮಾಂಕದ ವಧೇರಾ ಗಳಸಿದ ರನ್ ತಂಡ ಚನ್ನೈಗೆ 140 ರನ್ ಗುರಿ ನೀಡುವಲ್ಲಿ ಸಹಕಾರಿ ಆಯಿತು.
ಟಾಸ್ ಸೋತು ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ಗೆ ಇಳಿಯಿತು. ಆರಂಭಿಕ ಆಟಗಾರರಲ್ಲಿ ಪ್ರಯೋಗ ಮಾಡಿದ ಎಂಐ ತಂಡ ಯಶಸ್ವಿಯಾಗಲಿಲ್ಲ. ಸಾಮಾನ್ಯವಾಗಿ ಆರಂಭಿಕರಾಗಿ ಕಣಕ್ಕಿಳಿಯುವ ರೋಹಿತ್ ಶರ್ಮಾ ಕ್ಯಾಮರೂನ್ ಗ್ರೀನ್ಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಗ್ರೀನ್ ಬಡ್ತಿ ನೀಡಿ ಬೃಹತ್ ಮೊತ್ತ ಕೆಲೆ ಹಾಕುವ ಚಿಂತನೆ ವ್ಯರ್ಥವಾಯಿತು. 4 ಬಾಲ್ನಲ್ಲಿ 6 ರನ್ ಗಳಿಸಿ ಕ್ಯಾಮರೂನ್ ಗ್ರೀನ್ ಚೆನ್ನೈನ ತುಷಾರ್ ದೇಷಪಾಂಡೆಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೆ ಇಶಾನ್ ಕಿಶನ್ (7) ಸಹ ವಿಕೆಟ್ ಒಪ್ಪಿಸಿದರು.