ಲಂಡನ್: ಭಾರತ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ಇದರಿಂದ ಪಾಕಿಸ್ತಾನ ಕ್ರಿಕೆಟಿಗರ ಕುರಿತು ಟೀಕೆಗಳು ವ್ಯಕ್ತವಾಗುತ್ತಿದ್ದ ವೇಳೆ ಪಾಕ್ ವೇಗಿ ಭಾರತದ ವಿಶ್ವಕಪ್ ಕನಸು ನನಸಾಗಲಿದೆ ಎಂದು ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದರು.
ಜೂನ್ 16 ರಂದು ಮ್ಯಾಂಚೆಸ್ಟರ್ನಲ್ಲಿ ಕೊಹ್ಲಿಪಡೆ ಪಾಕಿಸ್ತಾನವನ್ನು 89 ರನ್ಗಳಿಂದ ಮಣಿಸಿತ್ತು. ಕೆಟ್ಟ ಪ್ರದರ್ಶನದಿಂದ ಕುಪಿತರಾದ ಪಾಕ್ ಅಭಿಮಾನಿಗಳು ತಮ್ಮ ತಂಡದ ಆಟಗಾರರ ಮೇಲೆ ಟೀಕೆ ಮಾಡಲಾರಂಭಿಸಿದ್ದರು. ಈ ವೇಳೆ ಭಾರತದ ಮುಮ್ತಾಜ್ ಖಾನ್ ಎಂಬುವವರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಈ ಟ್ವೀಟ್ಗೆ ರಿಪ್ಲೈ ಮಾಡಿದ್ದ ಹಸನ್ ಅಲಿ ನಿಮ್ಮ ಕನಸು ನನಸಾಗಲಿದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ವೈರಲ್ ಆಗಿತ್ತು.
ಹಸನ್ ಅಲಿ ಟ್ವೀಟ್ನಿಂದ ಕೆರಳಿದ ಪಾಕಿಸ್ತಾನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಲಿ ತಮ್ಮ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅವರು ಮಾಡಬೇಕಿದ್ದ ಟ್ವೀಟ್ ಭಾರತ ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ನೆಚ್ಚಿನ ತಂಡ ಎಂದೂ ಅದರೆ ಭಾರತವೇ ವಿಶ್ವಕಪ್ ಗೆಲ್ಲಲಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರಿಂದ ತಕ್ಷಣವೇ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.