ಕರ್ನಾಟಕ

karnataka

ಐಸಿಸ್ ಮುಖ್ಯಸ್ಥ ಅಬು ಅಲ್ ಹಸನ್ ಖುರೇಷಿ ಹತ್ಯೆ: ಹೊಸ ನಾಯಕನಿಂದ ಆಡಿಯೋ ಬಿಡುಗಡೆ

By

Published : Dec 1, 2022, 8:06 AM IST

ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ಮುಖ್ಯಸ್ಥ ಅಬು ಅಲ್ ಹಸನ್ ಅಲ್ ಹಾಶಿಮಿ ಅಲ್ ಖುರೇಷಿ ಹತ್ಯೆಗೀಡಾಗಿದ್ದಾನೆ. ಇರಾಕ್‌ನಲ್ಲಿ ನಡೆದ ಸಂಘರ್ಷದಲ್ಲಿ ಆತನನ್ನು ಹೊಡೆದುರುಳಿಸಿರುವುದಾಗಿ ತಿಳಿದುಬಂದಿದೆ.

Our Leader Killed In Battle  Killed In Battle Says Terror Group ISIS  Islamic State jihadist group  Abu Hasan a Hashimi al Qurashi  ಅಬು ಅಲ್ ಹಸನ್ ಖುರೇಷಿ ಹತ್ಯೆ  ಐಸಿಸ್ ಗ್ರೂಪ್ ಮುಖ್ಯಸ್ಥ ಅಬು ಅಲ್ ಹಸನ್ ಸಾವು  ಅಬು ಅಲ್ ಹಸನ್ ಅಲ್ ಹಾಶಿಮಿ ಅಲ್ ಖುರೇಷಿ ಹತ್ಯೆ  ಅಬು ಅಲ್ ಹುಸೇನ್ ಅಲ್ ಖುರೇಷಿಯನ್ನು ಹೊಸ ಐಎಸ್ ಮುಖ್ಯಸ್ಥ  ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ  ಉತ್ತರ ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಯುಎಸ್ ಪಡೆಗಳು
ಐಸಿಸ್ ಮುಖ್ಯಸ್ಥ ಅಬು ಅಲ್ ಹಸನ್ ಖುರೇಷಿ ಹತ್ಯೆ

ಬೈರುತ್(ಲೆಬನಾನ್):ಇಸ್ಲಾಮಿಕ್ ಸ್ಟೇಟ್(ಐಎಸ್‌) ಗುಂಪಿನ ಮುಖ್ಯಸ್ಥ ಅಬು ಅಲ್-ಹಸನ್ ಅಲ್-ಹಶಿಮಿ ಅಲ್-ಖುರೇಷಿಯನ್ನು ಹೊಡೆದುರುಳಿಸಲಾಗಿದೆ. ತಮ್ಮ ನಾಯಕ ಮೃತಪಟ್ಟಿರುವುದಾಗಿ ಉಗ್ರವಾದಿ ಸಂಘಟನೆ ಘೋಷಿಸಿದೆ. ಈ ಕುರಿತು ಆಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಅಬು ಅಲ್-ಹಸನ್ ಬದಲಿಗೆ ಅಬು ಅಲ್-ಹುಸೇನ್ ಅಲ್-ಖುರೇಷಿಯನ್ನು ಹೊಸ ಐಸಿಸ್‌ ಮುಖ್ಯಸ್ಥನನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.

ಆಡಿಯೋ ಸಂದೇಶದಲ್ಲಿ ಮಾತನಾಡಿರುವವರು ಭಯೋತ್ಪಾದಕ ಗುಂಪಿನ ಹೊಸ ಮುಖ್ಯಸ್ಥ ಅಬು ಅಲ್-ಹುಸೇನ್ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಸಂದೇಶದಲ್ಲಿ, ಅಬು ಅಲ್-ಹಸನ್ ಇರಾಕ್‌ನಲ್ಲಿ ಶತ್ರುಗಳೊಂದಿಗಿನ ಯುದ್ಧದಲ್ಲಿ ಹತ್ಯೆಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಈ ಹಿಂದೆ ಇದ್ದ ಐಸಿಸ್​ ಅಧ್ಯಕ್ಷ ಯಾವಾಗ ಮೃತಪಟ್ಟಿದ್ದಾನೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.

ಅಬು ಅಲ್-ಹಸನ್‌ಗೂ ಮುನ್ನ ಇದ್ದ ಐಸಿಸ್ ಮುಖ್ಯಸ್ಥ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಷಿಯನ್ನು ಫೆಬ್ರವರಿಯಲ್ಲಿ ಉತ್ತರ ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಯುಎಸ್ ಪಡೆಗಳು ಸುತ್ತುವರೆದಿದ್ದ ಸಂದರ್ಭದಲ್ಲಿ ಆತ ತನ್ನನ್ನು ತಾನು ಸ್ಫೋಟಿಸಿಕೊಂಡು ಪ್ರಾಣಬಿಟ್ಟಿದ್ದ. ಇಸ್ಲಾಮಿಕ್ ಸ್ಟೇಟ್‌ನ ಪ್ರಮುಖ ನಾಯಕ ಅಬು ಬಕರ್ ಅಲ್-ಬಾಗ್ದಾದಿ ಅಮೆರಿಕದ ಕಮಾಂಡೋಗಳ ದಾಳಿಯಲ್ಲಿ ಹತನಾದ ನಂತರ ಖುರೇಷಿ ಅಕ್ಟೋಬರ್ 31, 2019 ರಂದು ಐಸಿಸ್​ ಮುಖ್ಯಸ್ಥನ ಸ್ಥಾನವನ್ನು ಅಲಂಕರಿಸಿದ್ದನು.

ಇದನ್ನೂ ಓದಿ:ಅಮೆರಿಕ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಮಸೂದೆಗೆ ಸೆನೆಟ್‌ ಒಪ್ಪಿಗೆ

ABOUT THE AUTHOR

...view details