ETV Bharat / international

ಇರಾನ್ ಅಧ್ಯಕ್ಷರ ಚುನಾವಣೆ: ಬಿಗಿ ಭದ್ರತೆ ನಡುವೆ ಮತದಾನ, ಇದೀಗ ಮತ ಎಣಿಕೆ ಆರಂಭ - Iran Presidential Election - IRAN PRESIDENTIAL ELECTION

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿನ ಬಳಿಕ ಈ ದೇಶದಲ್ಲಿ ಬಿಗಿ ಭದ್ರತೆಯ ಮಧ್ಯೆಯೇ ಅಧ್ಯಕ್ಷೀಯ ಚುನಾವಣೆಯ ಮತದಾನ ನಡೆಯಿತು. ಚುನಾವಣೆಗೆ ಜನರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಮತದಾರರು ಉತ್ಸಾಹದಿಂದ ಬಂದು ತಮ್ಮ ಹೊಸ ಅಧ್ಯಕ್ಷರ ಆಯ್ಕೆಗಾಗಿ ಮತ ಚಲಾಯಿಸಿದ್ದಾರೆ. ಮೂರು ಮತದಾನದ ಅವಧಿಯನ್ನು ವಿಸ್ತರಿಸಲಾಯಿತು. ಮತದಾನ ಮುಕ್ತಾಯವಾದ ಬಳಿಕ ಮತ ಎಣಿಕೆ ಆರಂಭವಾಗಿದೆ.

Voting Amidst Tight Security  Counting Begins Now  Iran Presidential Election  Iran
ಇರಾನ್ ಅಧ್ಯಕ್ಷರ ಚುನಾವಣೆ: ಬಿಗಿ ಭದ್ರತೆಯ ಮಧ್ಯೆ ಮತದಾನ, ಇದೀಗ ಮತ ಎಣಿಕೆ ಆರಂಭ (AP)
author img

By PTI

Published : Jun 29, 2024, 9:41 AM IST

ಇರಾನ್: ಈ ವರ್ಷ ಮೇ 19 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ರಾಹಿಂ ರೈಸಿ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯಿತು.

ಹಮಾಸ್- ಇಸ್ರೇಲ್ ಯುದ್ಧದಿಂದ ಮಧ್ಯಪ್ರಾಚ್ಯ ಹೊತ್ತಿ ಉರಿತ್ತಿರುವಾಗಲೇ, ಇರಾನ್ ಅಧ್ಯಕ್ಷರು ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಸಾವು ಕಂಡಿದ್ದರು. ಈ ಮಧ್ಯೆ ಇರಾನ್ ಕೂಡ ಪರಿಸ್ಥಿತಿ ಅರಿತುಕೊಂಡು ಅಧ್ಯಕ್ಷೀಯ ಚುನಾವಣೆ ನಡೆಸಿದೆ. ಇರಾನ್ ದೇಶದ ಅಧ್ಯಕ್ಷೀಯ ಚುನಾವಣೆಗೆ ಒಟ್ಟು ನಾಲ್ವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಪಾರ್ಲಿಮೆಂಟ್‌ನ ಸ್ಪೀಕರ್‌ ಮೊಹಮ್ಮದ್ ಬಾಘಿರ್‌ ಖಲೀಬಫ್, ಸಯೀದ್‌ ಜಲೀಲಿ ಹಾಗು ಶಿಯಾ ಧರ್ಮಗುರು ಮೊಸ್ತಫಾ ಪೋರ್‌ಮೊಹಮ್ಮದಿ ನಡವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಮೂವರು ನಾಯಕರ ಪೈಕಿ ಒಬ್ಬರು ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.

ಇರಾನ್​ನಲ್ಲಿ ಮತದಾನ ನಡೆದಿದ್ದು ಹೇಗೆ?: ಅಧ್ಯಕ್ಷೀಯ ಚುನಾವಣೆಯ ಮತದಾನ ಬಲು ಚರುಕಿನಿಂದ ನಡೆದಿದೆ. ನಿನ್ನೆ (ಶುಕ್ರವಾರ) ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು. ಟೆಹ್ರಾನ್‌ನ ಸೇರಿದಂತೆ ಶುಕ್ರವಾರದ ನಡೆದ ಚುನಾವಣೆಯಲ್ಲಿ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ಇರಾನಿನವರು ಮತ ಚಲಾಯಿಸಿದರು. ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಮತದಾರರ ಉತ್ಸಾಹ ಕಡಿಮೆಯಿರುವುದು ಕಂಡು ಬಂದಿತ್ತು. ಕೆಲವು ಕಡೆಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

58,640 ಮತಗಟ್ಟೆಗಳಲ್ಲಿ ವೋಟಿಂಗ್​: ದೇಶಾದ್ಯಂತ ಮಸೀದಿಗಳು ಮತ್ತು ಶಾಲೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 58,640 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆಯಲ್ಲಿ ಮತ ಚಲಾಯಿಸಲು, ಮತದಾರರು ಮೊದಲು ಅರ್ಜಿಯನ್ನು ಭರ್ತಿ ಮಾಡಿ, ತಮ್ಮ ರಾಷ್ಟ್ರೀಯ ಗುರುತಿನ ಚೀಟಿಯನ್ನು ಪ್ರಸ್ತುತಪಡಿಸಬೇಕು. ನಂತರ ಅಭ್ಯರ್ಥಿಯ ಹೆಸರು ಮತ್ತು ಕೋಡ್ ಅನ್ನು ಯಾರಿಗೂ ಕಾಣದಂತೆ ಪೇಪರ್​ನಲ್ಲಿ ಬರೆಯುತ್ತಾರೆ. ನಂತರ ಅದನ್ನು ಮತ ಪೆಟ್ಟಿಗೆಯಲ್ಲಿ ಹಾಕುತ್ತಾರೆ.

ಇರಾನ್‌ನಲ್ಲಿ ಎಣಿಕೆ ಪ್ರಾರಂಭ: ನಿನ್ನೆ (ಶುಕ್ರವಾರ) ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನ ನಡೆಯಬೇಕಿತ್ತು. ಆದ್ರೆ, ಇರಾನ್‌ನಾದ್ಯಂತ ಶುಕ್ರವಾರ ಮಧ್ಯರಾತ್ರಿಯವರೆಗೂ ಮತದಾನ ನಡೆಯಿತು. ಮೂರು ಬಾರಿ ಮತದಾನದ ಅವಧಿಯನ್ನು ವಿಸ್ತರಿಸಲಾಗಿದೆ. ಮತದಾನ ಕೇಂದ್ರಗಳಲ್ಲಿ ಕಾಯುತ್ತಿರುವವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗುವುದು. ಆದರೆ, ಅದರ ನಂತರ ಬೇರೆಯವರಿಗೆ ಅವಕಾಶ ನೀಡಲಾಗುವುದಿಲ್ಲ. ಮತದಾನ ಮುಕ್ತಾಯವಾದ ಬಳಿಕ, ಎಣಿಕೆ ತಕ್ಷಣವೇ ಆರಂಭವಾಯಿತು. ಶನಿವಾರ (ಜೂ.29ರಂದು) ಆರಂಭಿಕ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ಇರಾನ್​ನ ಮಾಧ್ಯಮ ವರದಿಗಳು ತಿಳಿಸಿವೆ.

ಅಯತೊಲ್ಲಾ ಅಲಿ ಖಮೇನಿ ಪ್ರತಿಕ್ರಿಯೆ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಸಹ ಮತ ಚಲಾಯಿಸಿದರು, ಚುನಾವಣೆಯಲ್ಲಿ ಭಾಗವಹಿಸುವಂತೆ ಮತದಾರರಲ್ಲಿ ಅವರು ಇದೇ ವೇಳೆ ಮನವಿ ಮಾಡಿದರು. ಹೆಚ್ಚಿನ ಮತದಾನದ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ ಅವರು, ಈ ಚುನಾವಣೆಯು ಪ್ರಮುಖ ರಾಜಕೀಯ ಪರೀಕ್ಷೆ ಎಂದು ಹೇಳಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆಗಳು 2025ರಲ್ಲಿ ನಡೆಯಬೇಕಾಗಿತ್ತು. ಮೇ 19ರಂದು ವಾಯುವ್ಯ ಇರಾನ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ರಾಹಿಂ ರೈಸಿ ಸಾವನ್ನಪ್ಪಿದ ಕಾರಣ ಅವಧಿಗೂ ಮುನ್ನವೇ ಚುನಾವಣೆ ನಡೆಸಲಾಯಿತು. ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ದೊಲ್ಲಾಹಿಯಾನ್ ಹಾಗೂ ಇತರ ಇರಾನ್ ಅಧಿಕಾರಿಗಳೊಂದಿಗೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಇಸ್ರೇಲ್​ ಮೇಲೆ 35 ರಾಕೆಟ್​​, ಕ್ಷಿಪಣಿಗಳಿಂದ ದಾಳಿ ನಡೆಸಿದ ಲೆಬನಾನ್​ - Lebanon Fresh attack on Isreal

ETV Bharat Logo

Copyright © 2025 Ushodaya Enterprises Pvt. Ltd., All Rights Reserved.