ಕರ್ನಾಟಕ

karnataka

ಅಫ್ಘಾನಿಸ್ತಾನ ಜನತೆಗಾಗಿ ''ಸಣ್ಣ ನಗರಗಳನ್ನು'' ನಿರ್ಮಿಸುತ್ತಿರುವ ಅಮೆರಿಕ

By

Published : Sep 4, 2021, 5:25 PM IST

ಅಪಘಾನಿಸ್ತಾನ ಪುನಃ ತಾಲಿಬಾನ್​ ಕೈಸೇರಿದ ಬಳಿಕ ನಿರ್ಗತಿಕರಾದ ಅಲ್ಲಿನ ಜನರಿಗೆ ಅಮೆರಿಕ ಮಿಲಿಟರಿ ನೆಲೆಗಳಲ್ಲಿ ನೆಲೆ ಕಲ್ಪಿಸಿದೆ. ಇದೀಗ ಅಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕ​ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ.

US
ಯುಎಸ್​

ವಾಷಿಂಗ್ಟನ್​​:ಅಫ್ಘಾನಿಸ್ತಾನದ ವಲಸಿಗರಿಗೆ ಆಶ್ರಯ ನೀಡಿರುವ ಅಮೆರಿಕ ಸೇನಾ ನೆಲೆಗಳು ನೈರ್ಮಲ್ಯ, ಆಹಾರ ಸೇರಿದಂತೆ ಇತರ ಸವಾಲುಗಳನ್ನು ಎದುರಿಸಲು ತಮ್ಮದೇ ಆದ ನಗರ - ರೀತಿಯ ಸಂಸ್ಥೆಗಳನ್ನು ನಿರ್ಮಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಉತ್ತರ ಭಾಗದ ​ ಕಮಾಂಡ್ ಮುಖ್ಯಸ್ಥರಾಗಿರುವ ಏರ್ ಫೋರ್ಸ್ ಜನರಲ್ ಗ್ಲೆನ್ ವ್ಯಾನ್ಹರ್ಕ್ ಅವರು, ಶುಕ್ರವಾರದ ವೇಳೆಗೆ ಎಂಟು ಅಮೆರಿಕ​ ನೆಲೆಗಳಲ್ಲಿ 25,000 ಕ್ಕೂ ಹೆಚ್ಚು ಆಫ್ಘನಿಗಳು ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿಸಿದರು. ಆದರೆ ಭಾಷೆ, ಸಂಸ್ಕೃತಿ ಸೇರಿ ಇತರ ಸಮಸ್ಯೆಗಳು ಅಲ್ಲಿ ಸ್ಥಳಾಂತರಗೊಂಡಿರುವ ಜನರ ಮಧ್ಯೆ ಜಗಳಕ್ಕೆ ಕಾರಣವಾಗಿವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಈ ಸಮಸ್ಯೆಗಳ ನಿವಾರಣೆಗೆ "ಎಂಟು ಸಣ್ಣ ನಗರಗಳನ್ನು ಅಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಅಪಘಾನಿಸ್ತಾನದ ಭಾಷೆ ಗೊತ್ತಿರುವ ಮಿಲಿಟರಿ ಅಧಿಕಾರಿಯನ್ನೇ "ಮೇಯರ್" ಆಗಿ ನೇಮಿಸುವ ಮೂಲಕ ಒಂದೆರಡು ವಸತಿ ನಿಲಯಗಳು ಅಥವಾ ವಸತಿ ಘಟಕಗಳ ಉಸ್ತುವಾರಿ ವಹಿಸಲು ನೇಮಿಸಲಾಗುತ್ತಿದೆ. ಮತ್ತು ಯಾವುದೇ ಸಮಸ್ಯೆಗಳ ಬಗ್ಗೆ ಆಫ್ಘನ್​ ಜನರ ಜೊತೆ ನಿರರ್ಗಳವಾಗಿ ಮಾತನಾಡಬಲ್ಲ ಮತ್ತು ಹೆಚ್ಚುವರಿ ಭಾಷಾತಜ್ಞರನ್ನು ನೇಮಿಸುವಂತೆ ಉತ್ತರ ಕಮಾಂಡ್ ರಕ್ಷಣಾ ಇಲಾಖೆಯನ್ನು ಕೇಳಲಾಗಿದೆ ಎಂದು ಅವರು ಹೇಳಿದರು.

ಒಂಟಿ ಹೆಣ್ಣು - ಗಂಡಿಗೆ ಪ್ರತ್ಯೇಕ ವಸತಿ ಗೃಹ

ಇನ್ನು ಈ ವಸತಿ ನೆಲೆಗಳಲ್ಲಿ ಆಫ್ಘನ್​ನ ಒಂಟಿ ಗಂಡು ಮತ್ತು ಒಂಟಿ ಮಹಿಳೆಯರಿಗಾಗಿ ಪ್ರತ್ಯೇಕ ವಸತಿಗೃಹ ಇರಲಿದೆ. ಅಥವಾ ಕುಟುಂಬಗಳು ತಮಗೆ ನೀಡಿದ ವಿಭಾಗಗಳಲ್ಲಿ ಗೋಡೆಗಳನ್ನು ಕಟ್ಟಿ ಖಾಸಗಿತನ ಹೊಂದಲು ಅವಕಾಶವಿದೆ.

ಇನ್ನು ಸ್ಥಳಾಂತರಗೊಂಡವರಿಗೆ ಕೋವಿಡ್​ ಟೆಸ್ಟ್​ ಮಾಡುವಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ ಆದರೆ, ಭದ್ರತೆ ಕಲ್ಪಿಸುವಲ್ಲಿ ಯಾವುದೇ ಲೋಪಗಳಿ ಕೇಳಿ ಬಂದಿಲ್ಲ ಎಂದು ತಿಳಿಸಿದ್ರು.

ಎಂಟು ನೆಲೆಗಳಲ್ಲಿ ನೆಲೆಗೊಂಡಿರುವ ಆಫ್ಘನ್​ರ ಸಂಖ್ಯೆಯು ಕಾಲಕಳೆದಂತೆ ಏರುಪೇರಾಗುತ್ತದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ, ಆದರೆ ಶುಕ್ರವಾರದ ವೇಳೆಗೆ ಫೋರ್ಟ್ ಮೆಕಾಯ್, ವಿಸ್ಕ್., 8,800; ಫೋರ್ಟ್ ಬ್ಲಿಸ್, ಟೆಕ್ಸಾಸ್, 6,200; ಫೋರ್ಟ್ ಲೀ, ವಾ., 1,700; ಜಾಯಿಂಟ್ ಬೇಸ್ ಮೆಕ್‌ಗೈರ್ ಡಿಕ್ಸ್ –ಲೇಕ್‌ಹರ್ಸ್ಟ್, NJ, 3,700; ಹೊಲೋಮನ್ ಏರ್ ಫೋರ್ಸ್ ಬೇಸ್, ಎನ್ಎಂ, 650; ಮೆರೈನ್ ಕಾರ್ಪ್ಸ್ ಬೇಸ್ ಕ್ವಾಂಟಿಕೋ, ವಾ., 800; ಫೋರ್ಟ್ ಪಿಕೆಟ್, ವಾ., 3,650 ಮತ್ತು ಕ್ಯಾಂಪ್ ಅಟ್ಟರ್‌ಬರಿ, ಇಂಡಿ., 65 ಜನರಿಗೆ ಆಶ್ರಯ ನೀಡಿವೆ ಎಂದು ಅಮೆರಿಕ ಮಿಲಿಟರಿ ಮಾಹಿತಿ ನೀಡಿದೆ.

ABOUT THE AUTHOR

...view details