ಕರ್ನಾಟಕ

karnataka

ಭಾರತದ ವಾಯು ಪಡೆ ಬತ್ತಳಿಕೆ ಸೇರಿದ ಮತ್ತೆ 3 ರಫೇಲ್ ಫೈಟರ್ ಜೆಟ್​

By

Published : Jul 22, 2021, 5:55 AM IST

ಫ್ರಾನ್ಸ್‌ನಿಂದ ಭಾರತಕ್ಕೆ ಮತ್ತೆ ಮೂರು ರಫೇಲ್ ಫೈಟರ್ ಜೆಟ್‌ಗಳು ಬಂದಿವೆ. ಈ ಮೂಲಕ ಐಎಎಫ್​ನಲ್ಲಿ ರಫೇಲ್ ಜೆಟ್​ಗಳ ಸಂಖ್ಯೆ 24ಕ್ಕೆ ಏರಿದೆ.

Rafale jets
Rafale jets

ನವದೆಹಲಿ:ಫ್ರಾನ್ಸ್‌ನ ಮಿಲಿಟರಿ ಏರ್‌ಬೇಸ್‌ನಿಂದ ಏಳನೇ ಬ್ಯಾಚ್‌ನಲ್ಲಿ ಮೂರು ಅತ್ಯಾಧುನಿಕ ರಫೇಲ್ ಫೈಟರ್ ಜೆಟ್‌ಗಳು ಭಾರತಕ್ಕೆ ಬಂದು ತಲುಪಿವೆ.

ಭಾರತದ ವಾಯು ಪಡೆಗೆ ಮತ್ತಷ್ಟು ಶಕ್ತಿ ತುಂಬಲು ಫ್ರಾನ್ಸ್​ನಿಂದ ಸುಮಾರು 8 ಸಾವಿರ ಕಿಮೀ ದೂರದಿಂದ ನೇರವಾಗಿ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿವೆ. ಮಾರ್ಗ ಮಧ್ಯೆ ಯುಎಇ ವಾಯು ಪಡೆಯು ಜೆಟ್​ಗಳಿಗೆ ಇಂಧನ ಪೂರೈಸಿದೆ.

ಸದ್ಯ ರಫೇಲ್ ಯುದ್ಧ ವಿಮಾನಗಳ ಆಗಮನದಿಂದ ಭಾರತದಲ್ಲಿ ರಫೇಲ್ ಜೆಟ್​ಗಳ ಸಂಖ್ಯೆ 24ಕ್ಕೆ ಏರಿದೆ. ಪಶ್ಚಿಮ ಬಂಗಾಳದ ಹಸಿಮರಾ ವಾಯು ನೆಲೆಯಲ್ಲಿ ಈ ಮೂರು ವಿಮಾನಗಳನ್ನು ಇರಿಸುವ ಸಾಧ್ಯತೆ ಇದೆ.

2016ರ ಭಾರತ-ಫ್ರಾನ್ಸ್ ಒಪ್ಪಂದದಂತೆ 58 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಫ್ರಾನ್ಸ್ ಹಸ್ತಾಂತರಿಸಬೇಕಿದೆ. ಇದರ ಭಾಗವಾಗಿ ಕಳೆದ ಜುಲೈ 29 ರಂದು ಐದು ವಿಮಾನಗಳನ್ನು ಫ್ರಾನ್ಸ್ ಕಳಿಸಿತ್ತು. ಮುಂದಿನ ಕೆಲ ತಿಂಗಳಳಲ್ಲಿ ಭಾರತದ ವಾಯು ಪಡೆಗೆ ಮತ್ತಷ್ಟು ರಫೇಲ್ ಜೆಟ್​ಗಳು ಸೇರಲಿವೆ.

ABOUT THE AUTHOR

...view details