ETV Bharat / bharat

ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ - Amarnath Yatra suspended - AMARNATH YATRA SUSPENDED

ಹವಾಮಾನದ ಸುಧಾರಣೆ ಕಂಡಲ್ಲಿ ಮಾತ್ರ ಅಮರನಾಥ ಯಾತ್ರಿಗಳಿಗೆ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Amarnath Yatra temporarily suspended due to heavy rain
ಅಮರನಾಥ ಗುಹಾಂತರ ದೇಗುಲ (ಐಎಎನ್​ಎಸ್​)
author img

By ETV Bharat Karnataka Team

Published : Jul 6, 2024, 11:44 AM IST

ಅನಂತ್​ನಾಗ್​​: ಭಾರೀ ಮಳೆ ಹಿನ್ನಲೆ ಅಮರಾನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್​ ಗರ್ವನರ್​ ಮನೋಜ್​ ಸಿಹ್ನಾ ತಿಳಿಸಿದ್ದಾರೆ. ಯಾತ್ರಿಕರ ಶಿಬಿರ ಸೇರಿದಂತೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಯಾತ್ರಾ ಮಾರ್ಗದಲ್ಲಿ ಮಳೆಯಾಗುತ್ತಿದ್ದು, ಹಠಾತ್ ಪ್ರವಾಹಗಳು ಮತ್ತು ಭೂಕುಸಿತ ಉಂಟಾಗಬಹುದು. ಈ ಹಿನ್ನೆಲೆ ಶನಿವಾರದ ಯಾತ್ರಿಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7ನೇ ದಿನದ ಯಾತ್ರೆಯಲ್ಲಿ 5876 ಅಮರನಾಥ ಯಾತ್ರಿಕರು ಜಮ್ಮುವಿನ ಭಗವತಿ ನಗರ್​​ ಯಾತ್ರಿ ನಿವಾಸದಿಂದ ಅಮರನಾಥ ಗುಹಾ ದೇವಾಲಯದ ಕಡೆ ತೆರಳಿದರು. ಆದರೆ, ಬಳಿಕ ಅವರ ಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ. ಹವಾಮಾನದ ಸುಧಾರಣೆ ಕಂಡಲ್ಲಿ ಮಾತ್ರ ಯಾತ್ರಿಗಳಿಗೆ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹವಾಮಾನ ಮುನ್ಸೂಚನೆ: ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಅಮರನಾಥ ಗುಹಾ ದೇಗುಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಮುದ್ರ ಮಟ್ಟದಿಂದ 3,888 ಮೀಟರ್​ ಎತ್ತರವಿರುವ ಅಮರಾನಾಥ ಗುಹೆಗೆ ಯಾತ್ರಿಗಳು ಕಾಲ್ನಡಿಗೆ ಅಥವಾ ಕುದರೆ ಮೂಲಕ ತೆರಳಬೇಕಿದೆ. ಹಿಮಾಲಯದ ಆಳದಲ್ಲಿರುವ ಈ ಗುಹೆಯನ್ನು ಅನಂತನಾಗ್​ನ ಪಹಲ್ಗಾಮ್ ಅಕ್ಷ ಮತ್ತು ಗಂಡರ್ಬಲ್ ಸೋನಾಮಾರ್ಗ್ ಬಾಲ್ಟಾಲ್ ಅಕ್ಷದ ಮೂಲಕ ಪ್ರವೇಶಿಸಬಹುದು. ಈ ವರ್ಷದ ಅಮರನಾಥ ಯಾತ್ರೆಗೆ ಈವರೆಗೆ ಒಟ್ಟು 3.50 ಲಕ್ಷ ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ.

ಹೆಚ್ಚಿನ ಯಾತ್ರೆಗಳು ಬಾಲ್ಟಾಲ್ ಮಾರ್ಗದ ಮೂಲಕ ದೇಗುಲ ಪ್ರವೇಶಕ್ಕೆ ಮುಂದಾಗುತ್ತಾರೆ. ಆದರೆ ಈ ಹಾದಿಯು ಕಡಿದಾಗಿದ್ದು, ಅಂಕುಡೊಂಕಾದ ಪರ್ವತದ ಮಾರ್ಗವಾಗಿದೆ. ಬಾಲ್ಟಾಲ್‌ನಿಂದ ದೇಗುಲಕ್ಕೆ 16 ಕಿಮೀ ದೂರದ ಚಾರಣ ನಡೆಸಬೇಕಿದ್ದು, ಈ ಮಾರ್ಗ ತಲುಪಲು ಯಾತ್ರಿಕರಿಗೆ 1 ರಿಂದ 2 ದಿನ ಬೇಕಾಗುತ್ತದೆ.

ಮತ್ತೊಂದು ಮಾರ್ಗ ಎಂದರೆ, ಪಹಲ್ಗಾಮ್​ ಆಗಿದೆ. ಇಲ್ಲಿಂದ ಗುಹಾಂತರ ದೇಗುಲಕ್ಕೆ ಇರುವ ದೂರ 36 ರಿಂದ 48 ಕಿಮೀ ಆಗಿದೆ. ಈ ಮಾರ್ಗ ತಲುಪಲು 3 ರಿಂದ 5 ದಿನ ಬೇಕಾಗುತ್ತದೆ. ಇದು ದೀರ್ಘಾವಧಿ ಪ್ರಯಾಣವಾಗಿದ್ದು, ಬಾಲ್ಟಾಲ್​ಗೆ ಹೋಲಿಸಿದರೆ ಸುಲಭವಾಗಿದ್ದು, ಕಡಿಮೆ ಮೆಟ್ಟಿಲು ಹೊಂದಿದೆ.

52 ದಿನಗಳ ಅಮರನಾಥ ಯಾತ್ರೆ ಜೂನ್​ 29ರಿಂದ ಪ್ರಾರಂಭವಾಗಿದ್ದು, ಆಗಸ್ಟ್​ 19ರವರೆಗೆ ಸಾಗಲಿದೆ.

ಇದನ್ನೂ ಓದಿ: ಅಮರನಾಥ ಯಾತ್ರಾರ್ಥಿಗಳಿದ್ದ ಬಸ್​ನ ಬ್ರೇಕ್​ ಫೇಲ್​, ಪ್ರಾಣ ಉಳಿಸಿಕೊಳ್ಳಲು ಜಂಪ್​ ಮಾಡಿದ ಭಕ್ತರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.