ಹೈದರಾಬಾದ್ (ತೆಲಂಗಾಣ): ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ಮೂಲಕ ಹಾದು ಹೋಗುವ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್ಹೆಚ್-44) ಈಗಿನ ನಾಲ್ಕು ಲೇನ್ಗಳಿಂದ 12 ಪಥಗಳಿಗೆ ವಿಸ್ತರಣೆಯಾಗಲಿದೆ. ಎರಡು ಮೆಟ್ರೋ ನಗರಗಳ ನಡುವಿನ ವಾಹನ ದಟ್ಟಣೆ ಮತ್ತು ಭವಿಷ್ಯದ ದೃಷ್ಟಿಯಿಂದಾಗಿ ಈ ರಸ್ತೆಯನ್ನು 12 ಲೇನ್‌ಗಳಾಗಿ ವಿಸ್ತರಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಈ ಹೆದ್ದಾರಿಯಿಂದ ಆಂಧ್ರ ಮತ್ತು ತೆಲಂಗಾಣ ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದಷ್ಟು ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯೊಂದಿಗೆ ಅಭಿವೃದ್ಧಿ ಆಗುವ ಸಾಧ್ಯತೆ ಇದೆ.
ಆಂಧ್ರಪ್ರದೇಶದಲ್ಲಿ ಅತ್ಯಧಿಕ ವಿಸ್ತೀರ್ಣ:
ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಟ್ಟು ವಿಸ್ತೀರ್ಣ 576 ಕಿ.ಮೀ. ಇದರಲ್ಲಿ ಆಂಧ್ರಪ್ರದೇಶದಲ್ಲಿ 260 ಕಿ.ಮೀ., ತೆಲಂಗಾಣದ 210 ಕಿ.ಮೀ ಮತ್ತು ಕರ್ನಾಟಕದಲ್ಲಿ 106 ಕಿ.ಮೀ. ಹಾದು ಹೋಗಲಿದೆ. ಈ ಹೆದ್ದಾರಿಯು ಈ ಹೆದ್ದಾರಿಯು ಕರ್ನೂಲ್, ಡಾನ್, ಗುತ್ತಿ, ಅನಂತಪುರ ಮತ್ತು ಪೆನುಕೊಂಡ ಮೂಲಕ ಹಾದು ಹೋಗುತ್ತದೆ.
ರಸ್ತೆ ಉದ್ದಕ್ಕೂ ಅಭಿವೃದ್ಧಿ: ವಿಶಾಲವಾದ ರಸ್ತೆಗಳು, ವಿಮಾನ ನಿಲ್ದಾಣಗಳು ಮತ್ತು ಬಂದರು ಬಳಿ ಉದ್ಯಮ ಸ್ಥಾಪಿಸಲು ಕೈಗಾರಿಕೋದ್ಯಮಿಗಳು ಮುಂದಾಗುವುದು ಸಾಮಾನ್ಯ. ಇದರೊಂದಿಗೆ ಕಡಿಮೆ ಬೆಲೆಗೆ ಭೂಮಿ ಸಿಕ್ಕರೆ ಅಲ್ಲಿ ಕೈಗಾರಿಕೆಗಳನ್ನು ಹೆಚ್ಚಾಗಿ ತಲೆ ಎತ್ತುತ್ತವೆ. ಈಗ ಹೈದರಾಬಾದ್-ಬೆಂಗಳೂರು ಹೆದ್ದಾರಿಯ ವಿಸ್ತರಣೆಯಲ್ಲೂ ಇದೇ ಸಂಭವಿಸಲಿದೆ. ಸಂಯುಕ್ತ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳು ಈ ಎಲ್ಲಾ ಪ್ರಯೋಜನಗಳನ್ನು ಹೊಂದಿವೆ.
ಕೇಂದ್ರ ಸರ್ಕಾರವು ದೇಶದಾದ್ಯಂತ ಎಕ್ಸ್‌ಪ್ರೆಸ್‌ವೇಗಳ ಉದ್ದಕ್ಕೂ ಆರ್ಥಿಕ ಕಾರಿಡಾರ್‌ಗಳನ್ನು ಸ್ಥಾಪಿಸುತ್ತಿದೆ ಮತ್ತು ಅವುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇನ್ನೊಂದೆಡೆ ಕರ್ನಾಟಕ ಮತ್ತು ತೆಲಂಗಾಣದ ಉದ್ಯಮಿಗಳು ಸೀಮಾ ಜಿಲ್ಲೆಗಳಿಗೆ ಬರಬಹುದು. ಕರ್ನಾಟಕದ ಬೆಂಗಳೂರಿನ ಉಪನಗರಗಳಲ್ಲಿಯೂ ಭೂಮಿಯ ಬೆಲೆ ಹೆಚ್ಚು. ಹೀಗಾಗಿ ಆ ನಗರದ ಸಮೀಪದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಾದರೆ ಹೆದ್ದಾರಿ ಪಕ್ಕದಲ್ಲಿರುವ ಅನಂತಪುರ ಜಿಲ್ಲೆಗೆ ಬರಬಹುದು.
ಸೀಮಾ ಜಿಲ್ಲೆಗಳಲ್ಲಿ ಕಡಿಮೆ ಭೂಮಿ ಬೆಲೆ, ವಿದ್ಯುತ್ ಮತ್ತು ನೀರಿನ ಸೌಕರ್ಯ ಸಮರ್ಪಕವಾಗಿರುವುದರಿಂದ ಕೈಗಾರಿಕೋದ್ಯಮಿಗಳು ಇತ್ತ ಗಮನ ಹರಿಸಬಹುದೆಂಬ ಆಲೋಚನೆ ಇದೆ. ಇದರಿಂದ ಉದ್ಯೋಗಾವಕಾಶಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಲಿವೆ. ಹೀಗಾಗಿ ತೆಲಂಗಾಣ ಭಾಗದಲ್ಲೂ ಭೂಮಿಯ ಬೆಲೆ ಹೆಚ್ಚಿರುವುದರಿಂದ ಅಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಬಯಸುವವರು ಕರ್ನೂಲ್ ಜಿಲ್ಲೆಯ ಹೈದರಾಬಾದ್-ಬೆಂಗಳೂರು ಹೆದ್ದಾರಿ ಬಳಿಯ ಭೂಮಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ನಾಲ್ಕು ವಿಮಾನ ನಿಲ್ದಾಣಗಳು ಹತ್ತಿರ: ಈ ರಾಷ್ಟ್ರೀಯ ಹೆದ್ದಾರಿಯ ಬಳಿ ನಾಲ್ಕು ವಿಮಾನ ನಿಲ್ದಾಣಗಳ ಹತ್ತಿರದಲ್ಲಿವೆ. ಹೀಗಾಗಿ ಉದ್ಯಮಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಒಲವು ತೋರಬಹುದು.
- ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆಂಧ್ರಪ್ರದೇಶ-ಕರ್ನಾಟಕ ಗಡಿಯಿಂದ ಕೇವಲ 80 ಕಿ.ಮೀ. ದೂರದಲ್ಲಿದೆ.
- ಪುಟ್ಟಪರ್ತಿ ವಿಮಾನ ನಿಲ್ದಾಣವು ಪೆನುಕೊಂಡದಿಂದ 25 ಕಿಮೀ ದೂರದಲ್ಲಿದೆ.
- ಕರ್ನೂಲ್ನಿಂದ ಕೇವಲ 30 ಕಿ.ಮೀ. ದೂರದಲ್ಲಿರುವ ಓರ್ವಕಲ್ಲುವಿನಲ್ಲಿ ವಿಮಾನ ನಿಲ್ದಾಣವಿದೆ.
- ಕರ್ನೂಲ್ನಿಂದ 195 ಕಿ.ಮೀ ದೂರ ಕ್ರಮಿಸಿದರೆ ತೆಲಂಗಾಣದ ಶಂಶಾಬಾದ್ ವಿಮಾನ ನಿಲ್ದಾಣವನ್ನು ಸಹ ತಲುಪಬಹುದು.
ಹೈದರಾಬಾದ್-ಬೆಂಗಳೂರು ಹೆದ್ದಾರಿ ವಿಸ್ತರಣೆಯಿಂದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳು ಕೈಗಾರಿಕಾ ಕೇಂದ್ರಗಳಾಗಲಿವೆ.
- ಕೇಂದ್ರ ಸರ್ಕಾರದ ಸಂಸ್ಥೆಯಾದ ಕಸ್ಟಮ್ಸ್, ಇಂಡೈರೆಕ್ಟ್ ಟ್ಯಾಕ್ಸಸ್, ಮಾದಕ ವಸ್ತುಗಳ ರಾಷ್ಟ್ರೀಯ ಅಕಾಡೆಮಿ (NASIN) ಅನ್ನು ಈಗಾಗಲೇ ಅನಂತಪುರ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಬಿಹೆಚ್ಇಎಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
- ಹಿಂದೆ ಚಂದ್ರಬಾಬು ಅವರ ಪ್ರಯತ್ನದಿಂದ ಪೆನುಕೊಂಡದಲ್ಲಿ ಕಿಯಾ ಉದ್ಯಮ ಸ್ಥಾಪನೆಯಾಗಿ ಆಪ್ರದೇಶದ ಸ್ವರೂಪವೇ ಬದಲಾಯಿತು. ಪೆನುಕೊಂಡದಿಂದ ಪಾಲಸಮುದ್ರಕ್ಕೆ ಸುಮಾರು 30 ಕಿ.ಮೀ. 18 ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ.
- ಎಲೆಕ್ಟ್ರಿಕ್ ಬಸ್‌ಗಳು ಮತ್ತು ವಿಮಾನದ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳಿಗೆ ಈ ಪ್ರದೇಶದಲ್ಲಿ ಭೂಮಿಯನ್ನು ಹಂಚಿಕೆ ಮಾಡಲಾಗಿದೆ.
- 12 ಪಥಗಳಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕೈಗಾರಿಕೆಗಳು ಬರಲು ಅವಕಾಶ ಕಲ್ಪಿಸಲಿದೆ.
- ಈ ಹೆದ್ದಾರಿಯ ಸುತ್ತಲಿನ ಸರ್ಕಾರಿ ಜಮೀನುಗಳನ್ನು ಗುರುತಿಸಿ ಅವುಗಳಲ್ಲಿ ಎಪಿಐಐಸಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಿದರೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸಹ ಈ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತವೆ.