ಕರ್ನಾಟಕ

karnataka

ಎಎಸ್​​ಐ ಮೇಲೆ ಶಂಕಿತ ಉಗ್ರರಿಂದ ಗುಂಡಿನ ದಾಳಿ : ಸ್ಥಿತಿ ಗಂಭೀರ

By

Published : Feb 1, 2022, 6:38 PM IST

Updated : Feb 1, 2022, 7:01 PM IST

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದ ಎಎಸ್​​ಐ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

Suspected Militants fired upon a police man in Shopian
ಪೊಲೀಸ್​ ಸಿಬ್ಬಂದಿ ಮೇಲೆ ಶಂಕಿತ ಉಗ್ರರಿಂದ ಗುಂಡಿನ ದಾಳಿ

ಶೋಪಿಯಾನ್‌(ಜಮ್ಮು-ಕಾಶ್ಮೀರ) :ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಅಂಶೋಪೋರಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಎಎಸ್​​ಐ ಶಬ್ಬೀರ್ ಅಹಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಎಎಸ್​​ಐ ಮೇಲೆ ಶಂಕಿತ ಉಗ್ರರಿಂದ ಗುಂಡಿನ ದಾಳಿ
Last Updated : Feb 1, 2022, 7:01 PM IST

ABOUT THE AUTHOR

...view details