ನವದೆಹಲಿ: ಗಡಿಯಲ್ಲಿ ದೇಶ ಕಾಯುವ ಯೋಧರ ರಕ್ಷಣೆಗೆ ಇದೀಗ ಮತ್ತೊಂದು ಅಸ್ತ್ರ ಸಿದ್ಧಗೊಂಡಿದೆ. ಶತ್ರುಗಳ ಗುಂಡುಗಳಿಂದ ರಕ್ಷಣೆ ಮಾಡಲು ಡಿಆರ್ಡಿಒ ಹೊಸ ತಂತ್ರಜ್ಞಾನದೊಂದಿಗೆ ಹಗುರವಾದ ಗುಂಡುನಿರೋಧಕ ಜಾಕೆಟ್ಗಳನ್ನು ತಯಾರಿಸಿದೆ.
ಡಿಆರ್ಡಿಒ ಪ್ರಯೋಗಾಲಯದ ಕಾನ್ಫುರ ಡಿಫೆನ್ಸ್ ಮೆಟೀರಿಯಲ್ ಮತ್ತು ಸ್ಟೋರ್ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ ಈ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದೆ. ಇದು ಕೇವಲ 9 ಕೆಜಿ ತೂಕ ಹೊಂದಿದೆ.
ಈ ಜಾಕೆಟ್ ಬಿಐಎಸ್ ಮಾನದಂಡ ಹೊಂದಿದೆ. ಸೈನಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ಹಗುರವಾದ ಜಾಕೆಟ್ ತಯಾರು ಮಾಡಿದ್ದಕ್ಕಾಗಿ ಡಿಆರ್ಡಿಒ ವಿಜ್ಞಾನಿಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.