ಕರ್ನಾಟಕ

karnataka

Bulli Bai case: ದೂರುದಾರರಿಗೆ ಅಪರಿಚಿತರಿಂದ ಬೆದರಿಕೆ, ಮತ್ತೊಂದು ದೂರು ದಾಖಲು

By

Published : Jan 11, 2022, 3:29 AM IST

ತೀವ್ರ ಸಂಚಲನ ಸೃಷ್ಟಿಸಿರುವ ಬುಲ್ಲಿ ಬಾಯ್​ ಆ್ಯಪ್ ಪ್ರಕರಣದ ತನಿಖೆ ನಡೆಯುತ್ತಿದ್ದು, ದೂರುದಾರರಿಗೆ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.​

Bulli Bai case: Mumbai Police registers case against unknown person for threatening complainant
Bulli Bai case: ದೂರುದಾರರಿಗೆ ಅಪರಿಚಿತರಿಂದ ಬೆದರಿಕೆ, ಮತ್ತೊಂದು ದೂರು ದಾಖಲು

ಮುಂಬೈ , ಮಹಾರಾಷ್ಟ್ರ : ಬುಲ್ಲಿ ಬಾಯ್​ ಆ್ಯಪ್ ಪ್ರಕರಣದ ತನಿಖೆ ವೇಗವಾಗಿ ನಡೆಯುತ್ತಿದೆ. ಆ್ಯಪ್​ನ ವಿರುದ್ಧ ದೂರು ನೀಡಿದ್ದ ವ್ಯಕ್ತಿಗಳಿಗೆ ಅಪರಿಚಿತರು ಬೆದರಿಕೆ ಹಾಕಿದ್ದು, ಈ ಬಗ್ಗೆಯೂ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೂರುದಾರರ ಸಂಖ್ಯೆಗಳು ಅಪರಿಚಿತ ವ್ಯಕ್ತಿಗಳಿಗೆ ಹೇಗೆ ಸಿಕ್ಕಿವೆ ಎಂಬುದರ ಬಗ್ಗೆಯೂ ಅವರು ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಪ್ರಸ್ತುತ ಬುಲ್ಲಿ ಬಾಯ್​ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಇಬ್ಬರು ಆರೋಪಿಗಳಾದ ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವಲ್ ಅವರನ್ನು ಬಾಂದ್ರಾ ನ್ಯಾಯಾಲಯವು ಜನವರಿ 14ರವರೆಗೆ ಮುಂಬೈ ಸೈಬರ್ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಜನವರಿ 5ರಂದು ಉತ್ತರಾಖಂಡದಲ್ಲಿ ಅವರನ್ನು ಬಂಧಿಸಲಾಗಿತ್ತು.

ಮತ್ತೊಬ್ಬ ಆರೋಪಿ ವಿಶಾಲ್ ಕುಮಾರ್ ಝಾನನ್ನು ಜನವರಿ 24ರವರೆಗೆ ನ್ಯಾಯಾಂಗ ಬಂಧನ ಒಪ್ಪಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಾದ ನೀರಜ್ ಬಿಷ್ಣೋಯ್ ಮತ್ತು ಔಮಕೇರಶ್ವರ್ ಠಾಕೂರ್ ದೆಹಲಿ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ:Punjab Election: ಪಿಎಲ್​ಸಿಗೆ ಹಾಕಿ ಸ್ಟಿಕ್ ಮತ್ತು ಬಾಲ್​​.. ಗೋಲು ಮಾತ್ರ ಬಾಕಿ ಎಂದ ಕ್ಯಾಪ್ಟನ್

ABOUT THE AUTHOR

...view details