ETV Bharat / bharat

ಲೋಕಸಭೆಲ್ಲಿ 100 ನಿಮಿಷಗಳ ನಿರರ್ಗಳ ಭಾಷಣ: ಎನ್‌ಡಿಎ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ - Rahul Gandhi slammed NDA

author img

By ETV Bharat Karnataka Team

Published : Jul 1, 2024, 10:05 PM IST

ತಮ್ಮ 100 ನಿಮಿಷಗಳ ಭಾಷಣದಲ್ಲಿ ಧರ್ಮದೊಂದಿಗೆ ರಾಜಕೀಯ ಬೆರೆಸುವುದು, ರೈತರನ್ನು ನಿರ್ಲಕ್ಷಿಸುವುದು, ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಅಗ್ನಿಪಥ್‌ನಂತಹ ದೋಷಪೂರಿತ ನೀತಿಗಳ ಕುರಿತು ರಾಹುಲ್ ಗಾಂಧಿ ಎನ್‌ಡಿಎಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Rahul Gandhi
ರಾಹುಲ್ ಗಾಂಧಿ (ETV Bharat)

ನವದೆಹಲಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಮೊದಲ ಭಾಷಣದ ಬಗ್ಗೆ ಕಾಂಗ್ರೆಸ್ ಭಾರಿ ಹರ್ಷಗೊಂಡಿದೆ. ಇನ್ನು ರಾಹುಲ್​ ಗಾಂಧಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಮೋದಿ ಸಂಪುಟದ ಸಚಿವರು ಸರ್ಕಾರ ಹಾಗೂ ಪ್ರಧಾನಿ ನೆರವಿಗೆ ಬಂದರು. ಮಧ್ಯೆ ಮಧ್ಯೆ ರಾಹುಲ್​ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ತಮ್ಮ 100 ನಿಮಿಷಗಳ ಭಾಷಣದಲ್ಲಿ, ಧರ್ಮದೊಂದಿಗೆ ರಾಜಕೀಯ ಬೆರೆಸುವುದು, ರೈತರನ್ನು ನಿರ್ಲಕ್ಷಿಸುವುದು, ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಅಗ್ನಿಪಥ್‌ನಂತಹ ದೋಷಪೂರಿತ ನೀತಿಗಳ ಕುರಿತು ರಾಹುಲ್ ಗಾಂಧಿ ಎನ್‌ಡಿಎಯನ್ನು ತರಾಟೆಗೆ ತೆಗೆದುಕೊಂಡರು ಮತ್ತು ಸದನದಲ್ಲಿ ಕುರ್ಚಿ ಸರ್ವೋಚ್ಚ ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೂ ನೆನಪಿಸಿದರು.

"ಇಡೀ ವಿರೋಧವನ್ನು ಎದುರಿಸಲು ನಾನೊಬ್ಬನೇ ಸಾಕು ಎಂದು ಪ್ರಧಾನಿ ಹೇಳುತ್ತಿದ್ದರು. ಆದರೆ ಇಂದು ರಾಹುಲ್ ಗಾಂಧಿ ಅವರ ಬಿರುಗಾಳಿ ಭಾಷಣ ಅದೆಲ್ಲವನ್ನೂ ಸುಳ್ಳಾಗಿಸಿದೆ. ನಮ್ಮ ನಾಯಕನ ಶಕ್ತಿಯುತ ಭಾಷಣದಿಂದ ಆಡಳಿತ ಪಕ್ಷ ವಿಚಲಿತವಾಗಿದೆ. ಪ್ರಧಾನ ಮಂತ್ರಿ ಮತ್ತು ಅವರ ಹಲವಾರು ಕ್ಯಾಬಿನೆಟ್ ಮಂತ್ರಿಗಳು ಆಗಾಗ ಮಧ್ಯಪ್ರವೇಶಿಸಿ ಸರ್ಕಾರದ ನೀತಿಯನ್ನು ಸಮರ್ಥಿಸಿಕೊಳ್ಳಬೇಕಾಯಿತು ಎಂದು ಲೋಕಸಭೆಯ ಉಪ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಈಟಿವಿ ಭಾರತ್‌ಗೆ ತಿಳಿಸಿದರು.

“ರಾಹುಲ್ ಗಾಂಧಿ ಅವರು ಇಂದು ಇಡೀ ಪ್ರತಿಪಕ್ಷಗಳಷ್ಟೇ ಅಲ್ಲ, ಈ ದೇಶದ ಜನರ ಧ್ವನಿಯಾಗಿದ್ದಾರೆ. ಪ್ರತಿಪಕ್ಷಗಳು ಎನ್‌ಡಿಎಯನ್ನು ಹೊಣೆಗಾರರನ್ನಾಗಿ ಮಾಡುವುದರಿಂದ ಅವರು ಇಂದು ಸದನದಲ್ಲಿ ಮಾತನಾಡಿದ ರೀತಿ ಸಂಸತ್ತಿನ ಚರ್ಚಾ ದಿಕ್ಕನ್ನು ಬದಲಿಸಿದೆ. ಇದು 2024 ರ ರಾಷ್ಟ್ರೀಯ ಚುನಾವಣೆಯ ಜನಾದೇಶವಾಗಿದ್ದು, ಇದರಲ್ಲಿ ಜನರು ಪ್ರತಿಪಕ್ಷಗಳಿಗೆ ಬಲ ನೀಡಿದ್ದಾರೆ” ಎಂದು ಅವರು ಬಣ್ಣಿಸಿದ್ದಾರೆ.

ಗುಜರಾತ್​ನಲ್ಲಿ ಮುಂಬರುವ ಎಲೆಕ್ಷನ್​​ನಲ್ಲಿ ಬಿಜೆಪಿಯನ್ನ ಸೋಲಿಸಿಯೇ ಸೋಲಿಸುತ್ತೇವೆ: 2027 ರ ವಿಧಾನಸಭಾ ಚುನಾವಣೆಯಲ್ಲಿ ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಇಂಡಿಯಾ ಒಕ್ಕೂಟ ಬಿಜೆಪಿಯನ್ನು ಸೋಲಿಸುತ್ತದೆ ಎಂದು ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಘೋಷಿಸಿದ್ದಾರೆ.

ಕಾಂಗ್ರೆಸ್ 2017 ರಲ್ಲಿ 77 ಸ್ಥಾನಗಳನ್ನು ಗೆದ್ದಾಗ ಸರ್ಕಾರ ರಚಿಸುವ ಸಮೀಪಕ್ಕೆ ಬಂದಿತ್ತು ಮತ್ತು ಮುಂಬರುವ ತಿಂಗಳುಗಳಲ್ಲಿ 2027ರ ವಿಧಾನಸಭಾ ಚುನಾವಣೆಗೆ ಪ್ರಚಾರವನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಇದೇ ವೇಳೆ ಕಾಂಗ್ರೆಸ್​ ನಾಯಕ ಚಾವ್ಡಾ ಹೇಳಿದ್ದಾರೆ.

“ರಾಹುಲ್ ಗಾಂಧಿ ಅವರು 2017 ರಲ್ಲಿ ಗುಜರಾತ್‌ನಲ್ಲಿ ಮಹತ್ವದ ಸಮಯವನ್ನು ಮೀಸಲಿಟ್ಟಿದ್ದರು ಮತ್ತು ನಾವು ಸರ್ಕಾರ ರಚನೆಗೆ ಹತ್ತಿರವಾಗಿದ್ದೆವು. 2022 ರಲ್ಲಿ ನಮ್ಮ ಸಂಖ್ಯೆ ಕುಸಿಯಿತು. ಆದರೆ, 2027ರ ವಿಧಾನಸಭಾ ಚುನಾವಣೆಗೆ ನಾವು ಶ್ರಮಿಸುತ್ತೇವೆ. ಸದ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ಪರಿಶೀಲಿಸುತ್ತಿದ್ದೇವೆ. ನಾವು 26 ಸ್ಥಾನಗಳಲ್ಲಿ 1 ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾದರೂ, ನಮ್ಮ ಮತಗಳ ಹಂಚಿಕೆ ಪ್ರಮಾಣವನ್ನು ಸುಧಾರಿಸಿಕೊಂಡಿದ್ದೇವೆ. ನವೆಂಬರ್‌ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆಯ ನಂತರ, ಮುಂದಿನ ವಿಧಾನಸಭಾ ಚುನಾವಣೆಗೆ ರಾಹುಲ್ ಗಾಂಧಿ ಅವರ ನಿರ್ದೇಶನದಲ್ಲಿ ಕಾರ್ಯತಂತ್ರವನ್ನು ರೂಪಿಸಲಾಗುವುದು'' ಎಂದು ಚಾವ್ಡಾ ಹೇಳಿದ್ದಾರೆ.

ಇದನ್ನೂ ಓದಿ : 'ಆಪ್ ಹಿಂದೂ ಹೋ ಹಿ ನಹೀ' ಹೇಳಿಕೆ ವಿಚಾರ: ಕ್ಷಮೆಯಾಚನೆಗೆ ಬಿಜೆಪಿ ಪಟ್ಟು: ನೀಟ್ ಪರೀಕ್ಷೆ ಶ್ರೀಮಂತ ವಿದ್ಯಾರ್ಥಿಗಳಿಗೆ, ಪ್ರತಿಭಾವಂತರಿಗೆ ಅಲ್ಲ: ರಾಗಾ - Rahul Gandhi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.