ಕರ್ನಾಟಕ

karnataka

ಭಾರತ ಬುಲೆಟ್​ ಪ್ರೂಫ್​ ಜಾಕೆಟ್​ ತಯಾರಿಸಿ ನೂರಾರು ದೇಶಗಳಿಗೆ ರಫ್ತು ಮಾಡುತ್ತಿದೆ: ಮೋದಿ

By

Published : Sep 19, 2019, 11:55 PM IST

Updated : Sep 20, 2019, 12:02 AM IST

ಕಾಂಗ್ರೆಸ್ ನೇತೃತ್ವದ ಸರ್ಕಾರವು ದೇಶದ ಭದ್ರತಾ ಸಿಬ್ಬಂದಿಗೆ ಬೇಕಾಗಿದ್ದ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್​ಗಳ ಬೇಡಿಕೆಯನ್ನು ನಿರ್ಲಕ್ಷಿಸಿತ್ತು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಭಾರತೀಯ ಸೇನೆಗೆ ಬೇಕಾದ ಬುಲೆಟ್​ ಪ್ರೂಫ್​ ಜಾಕೆಟ್​ಗಳನ್ನು ಸಮರ್ಪಕವಾಗಿ ಪೂರೈಸುತ್ತಿದ್ದೇವೆ. ಮಾತ್ರವಲ್ಲದೆ ನೂರಾರು ದೇಶಗಳಿಗೆ ನಮ್ಮ ಭಾರತವೇ ಬುಲೆಟ್​ ಪ್ರೂಫ್​ ಜಾಕೆಟ್ ಪೂರೈಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಾಸಿಕ್​ನಲ್ಲಿ ಮೋದಿ ಭಾಷಣ

ನಾಸಿಕ್(ಮಹಾರಾಷ್ಟ್ರ): ದೇಶದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಭಾರತೀಯ ಸೇನಾಪಡೆಗೆ ಬೇಕಾದ ಬುಲೆಟ್​ ಪ್ರೂಫ್​ ಜಾಕೆಟ್ ಪೂರೈಸಿರುವುದು ಮಾತ್ರವಲ್ಲದೆ ನೂರಾರು ದೇಶಗಳಿಗೆ ಭಾರತವೇ ಬುಲೆಟ್​ ಪ್ರೂಫ್​ ಜಾಕೆಟ್ ಪೂರೈಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ನಾಸಿಕ್​ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರವು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಗಂಭೀರವಾಗಿರಲಿಲ್ಲ. 2009 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು, ದೇಶದ ಭದ್ರತಾ ಸಿಬ್ಬಂದಿಗೆ ಬೇಕಾಗಿದ್ದ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್​ಗಳ ಬೇಡಿಕೆಯನ್ನು ನಿರ್ಲಕ್ಷಿಸಿತ್ತು ಎಂದು ಆರೋಪಿಸಿದರು.

ನಾಸಿಕ್​ನಲ್ಲಿ ಮೋದಿ ಭಾಷಣ

ಎರಡು ಪ್ರಬಲ ಹೆಲಿಕಾಪ್ಟರ್‌ಗಳನ್ನು ಇತ್ತೀಚೆಗೆ ಭಾರತೀಯ ವಾಯುಪಡೆಗೆ ಸೇರಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ರಫೇಲ್ ಯುದ್ಧ ವಿಮಾನಗಳು ಐಎಎಫ್‌ಗೆ ಸೇರ್ಪಡೆಗೊಳ್ಳಲಿವೆ. ಮೂರು ಪಡೆಗಳ ನಡುವೆ ಉತ್ತಮ ಹೊಂದಾಣಿಕೆಗಾಗಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನು ಹೊಂದಲು ನಾವು ಬಹುಕಾಲದಿಂದ ಬಾಕಿ ಇದ್ದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು.

ಭದ್ರತಾ ಸನ್ನದ್ಧತೆಯ ವಿಚಾರದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ವರ್ತನೆ ಎಂದಿಗೂ ಉತ್ತಮವಾಗಿರಲಿಲ್ಲ. ಇದನ್ನು ಮತ್ತೆ ಮತ್ತೆ ನಾವು ನೆನಪಿಸಿಕೊಳ್ಳಬೇಕಾಗಿದೆ ಎಂದು ಮೋದಿ ಹೇಳಿದ್ರು.

Last Updated : Sep 20, 2019, 12:02 AM IST

ABOUT THE AUTHOR

...view details