ETV Bharat / bharat

30 ವಾರದ ಭ್ರೂಣದ ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್​ ಅನುಮತಿ - terminate 30 week pregnancy

ಭ್ರೂಣದಲ್ಲಿರುವ ಮಗುವು ಜನಿಸಿದಲ್ಲಿ ಗಂಭೀರ ನರ ವೈಕಲ್ಯತೆ ಹಾಗೂ ಅನೇಕ ಆರೋಗ್ಯ ಸಮಸ್ಯೆಯ ಜೋಬರ್ಟ್​​ ಸಿಂಡ್ರೋಮ್​ ಸಮಸ್ಯೆಗೆ ಒಳಗಾಗಲಿದೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.

delhi-hc-allows-woman-to-medically-terminate-30-week-pregnancy
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By PTI

Published : Jul 6, 2024, 4:32 PM IST

ನವದೆಹಲಿ: 31 ವರ್ಷದ ಮಹಿಳೆ 30 ವಾರದ ಭ್ರೂಣ ನರಾಭಿವೃದ್ಧಿ ಸಮಸ್ಯೆ ಹೊಂದಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಗರ್ಭಪಾತ ನಡೆಸಲು ದೆಹಲಿ ಹೈಕೋರ್ಟ್​ ಅನುಮತಿ ನೀಡಿದೆ. ಏಮ್ಸ್​​ ವೈದ್ಯರ ತಂಡ ನೀಡಿದ ವರದಿ ಪರಿಶೀಲಿಸಿದ ನ್ಯಾಯಾಲಯ ಮಗು ಹುಟ್ಟಿದಲ್ಲಿ ಗಂಭೀರ ಅಸಹಜತೆಗೆ ಒಳಗಾಗುವ ಹಿನ್ನೆಲೆಯಲ್ಲಿ ಈ ಗರ್ಭಹೊರಲು ನ್ಯಾಯಾಲಯ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ.

ಭ್ರೂಣದಲ್ಲಿರುವ ಮಗುವು ಜನಿಸಿದಲ್ಲಿ ಗಂಭೀರ ನರ ವೈಕಲ್ಯತೆ ಹಾಗೂ ಅನೇಕ ಆರೋಗ್ಯ ಸಮಸ್ಯೆಯ ಜೋಬರ್ಟ್​​ ಸಿಂಡ್ರೋಮ್​ ಸಮಸ್ಯೆಗೆ ಒಳಗಾಗಲಿದೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.

ಅರ್ಜಿದಾರರ ಮೊದಲ ಮಗು ಕೂಡ ನರ ವಿಕಲಚೇತನ ಸಮಸ್ಯೆಯಿಂದ ಬಳಲುತ್ತಿದೆ. ಇದೀಗ ಈ ಭ್ರೂಣದ ಗರ್ಭಪಾತಕ್ಕೆ ವೈದ್ಯಕೀಯ ಅನುಮತಿ ನೀಡದೇ ಹೋದಲ್ಲಿ, ಕುಟುಂಬವೂ ನರಾಭಿವೃದ್ಧಿ ಸಮಸ್ಯೆ ಹೊಂದಿರುವ ಎರಡು ಮಗುವನ್ನು ಪೋಷಿಸಬೇಕಾಗುತ್ತದೆ. ಇದರಿಂದ ಮಕ್ಕಳು ನಿರಂತರ ಮತ್ತು ಸುಧಾರಿತ ವೈದ್ಯಕೀಯ ಆರೈಕೆಯ ಅಗತ್ಯ ಇರುತ್ತದೆ. ಗಂಭೀರ ಅಂಗವೈಕಲ್ಯತೆ ಸಮಸ್ಯೆ ಹೊಂದಿರುವ ಮಕ್ಕಳನ್ನು ಸಲುವಲು ಆರ್ಥಿಕ ಹೊರೆ ಕೂಡ ಹೆಚ್ಚಲಿದೆ. ಇದು ಅರ್ಜಿದಾರರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ.

ಸಮರ್ಥ ವೈದ್ಯಕೀಯ ಕಾರಣಗಳಿದ್ದಲ್ಲಿ, ಗರ್ಭಿಣಿ ಮಹಿಳೆಯ ಹಕ್ಕನ್ನು ಕಾಪಾಡಲು ಗರ್ಭಪಾತಕ್ಕೆ ಅನುಮತಿ ನೀಡಲಾಗುವುದು. ಇದು ಮಹಿಳೆಗೆ ಮಗುವಿನ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಅಥವಾ ತೀವ್ರ ಅಸಹಜತೆಗಳೊಂದಿಗೆ ಮಗುವಿನ ಜನನಕ್ಕೆ ಕಾರಣವಾಗುವ ಸಂದರ್ಭಗಳಲ್ಲಿ ಗರ್ಭದಾರಣೆಗೆ ಒತ್ತಾಯಿಸಲಾಗದು. ಲೋಕನಾಯಕ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ಪ್ರಸ್ತುತ ಪ್ರಕರಣದಲ್ಲಿ ನ್ಯಾಯಾಲಯದ ನಿರೀಕ್ಷೆಗಳನ್ನು ಪೂರೈಸಿಲ್ಲ. ಭ್ರೂಣದ ಆರೋಗ್ಯ ಪರೀಕ್ಷೆಯಲ್ಲಿ ಗಂಭೀರ ಸ್ವರೂಪದ ಹೊರತಾಗಿಯೂ, ಅಗತ್ಯ ಪರೀಕ್ಷೆಗಳನ್ನು ನಡೆಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತರಿಗೆ 28 ​​ವಾರಗಳ ನಂತರ ಗರ್ಭಪಾತಕ್ಕೆ ಸುಪ್ರೀಂ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.