ETV Bharat / health

ಬಡತನ ಮತ್ತು ಮಾನಸಿಕ ಅಸ್ವಸ್ಥತೆಯ 2 ಸಾಮಾನ್ಯ ಸಂಬಂಧ ಪತ್ತೆ ಹಚ್ಚಿದ ಸಂಶೋಧಕರು - Poverty And Mental Illnesses

author img

By ETV Bharat Karnataka Team

Published : Jul 11, 2024, 11:47 AM IST

ಕೆಲವು ಮಾನಸಿಕ ಪರಿಸ್ಥಿತಿಗಳು ಹಣಕಾಸಿನ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತವೆ. ಈ ಕುರಿತು ನಡೆಸಲಾದ ಹೊಸ ಅಧ್ಯಯನ ವರದಿಯ ಅಂಶಗಳು ಹೀಗಿವೆ.

Living in poverty could be causing mental illnesses
ಸಾಂದರ್ಭಿಕ ಚಿತ್ರ (ETV Bharat)

ಹೈದರಾಬಾದ್​: ಬಡತನ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಇವು ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಈ ಹಿಂದಿನ ಅಧ್ಯಯನಗಳು ಕೂಡಾ ಬಡತನ ಮತ್ತು ಮಾನಸಿಕ ಅಸ್ವಸ್ಥತೆಯ ನಡುವೆ ಬಲವಾದ ಸಂಬಂಧವನ್ನು ತೋರಿಸಿವೆ. ಆದರೆ, ಸಂಶೋಧಕರಿಗೆ ಇವೆರಡರ ನಡುವಿನ ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ಗ್ರಹಿಸಲು ಸಾಧ್ಯವಾಗಿಲ್ಲ.

ಕೆಲವು ಮಾನಸಿಕ ಪರಿಸ್ಥಿತಿಗಳು ಹಣಕಾಸಿನ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತವೆ. ಬಡತನ ತೀವ್ರ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಅಧ್ಯಯನದ ಲೇಖಕರು ಕಂಡುಕೊಂಡಿದ್ದಾರೆ. ಈ ಕುರಿತು ಯುಕೆ ಬಯೋಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಸೈಕಿಯಾಟ್ರಿಕ್ ಜಿನೋಮಿಕ್ ಕನ್ಸೋರ್ಟಿಯಂನಿಂದ ಪಡೆದ ದತ್ತಾಂಶವನ್ನು ವಿಶ್ಲೇಷಿಸಿದ್ದಾರೆ.

ಮಕ್ಕಳಲ್ಲಿ ಉಂಟಾಗುವ ಗಮನದ ಕೊರತೆಯ ಸಮಸ್ಯೆಗಳಾದ ಹೈಪರ್​ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್​ಡಿ) ಮತ್ತು ಸ್ಕಿಜೋಫ್ರೇನಿಯಾಕ್ಕೆ ಬಡತನ ಕಾರಣ ಎಂದು ಕಂಡುಬಂದಿದೆ. ಅದರಲ್ಲೂ ಮುಖ್ಯವಾಗಿ, ಬಡತನ ಮಾನಸಿಕ ಖಿನ್ನತೆ ಮತ್ತು ಸ್ಕಿಜೋಫ್ರೇನಿಯಾಗೆ ಕೊಡುಗೆ ನೀಡುತ್ತದೆ ಎಂದು ನೆದರ್ಲ್ಯಾಂಡ್​ನ ಆಮ್‌ಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯದ ಮನೋವೈದ್ಯ ಮಾರ್ಕೊ ಬೋಕ್ಸ್​ ಹೇಳಿದ್ದಾರೆ.

ಎಡಿಎಚ್​ಡಿ ಹೊಂದಿರುವ ಮಕ್ಕಳು ಕಡಿಮೆ ಏಕಾಗ್ರತೆ ಹೊಂದಿರುತ್ತಾರೆ. ಇದರ ಜೊತೆಗೆ, ಚಡಪಡಿಕೆ ಮತ್ತು ಹಠಾತ್​​ ಮನೋಭಾವನೆಯ ಪ್ರವೃತ್ತಿ ಹೊಂದಿರುತ್ತಾರೆ. ಇನ್ನು ಸ್ಕಿಜೋಫ್ರೇನಿಯಾ ಹೊಂದಿರುವ ಮಕ್ಕಳು ವಿಚಿತ್ರ ಗ್ರಹಿಕೆ ಹೊಂದಿದ್ದು, ವಾಸ್ತವವನ್ನು ಹೇಗೆ ಯೋಚಿಸುತ್ತಾರೆ, ಅನುಭವಿಸುತ್ತಾರೆ ಮತ್ತು ವರ್ತಿಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

ಈ ಅಧ್ಯಯನವನ್ನು ಜರ್ನಲ್​ ನೇಚರ್​ ಹ್ಯೂಮನ್​ ಬಿಹೇವಿಯರ್​ನಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರು ಬಡತನವನ್ನು ಮನೆ ಆದಾಯ, ಉದ್ಯೋಗದ ಆದಾಯ ಮತ್ತು ಸಾಮಾಜಿಕ ಅಭಾವದ ಮೇಲೆ ಅಳತೆ ಮಾಡಿದ್ದಾರೆ.

ಮಾನಸಿಕ ಆರೋಗ್ಯದ ಮೇಲೆ ಬಡತನದ ಪರಿಣಾಮಗಳನ್ನು ಪ್ರತ್ಯೇಕಿಸಲು ಆನುವಂಶಿಕ ಮಾಹಿತಿಯನ್ನು ಹಾಗೂ ಮೆಂಡೆಲಿಯನ್ ರಾಂಡಮೈಸೆಷನ್​ ವಿಧಾನವನ್ನು ಬಳಸಲಾಗಿದೆ. ಇಲ್ಲಿ ಬಡತನದಿಂದ ಬಂದವರಲ್ಲಿ ಮಾನಸಿಕ ಅಸ್ವಸ್ಥತೆ ಹೇಗೆ ಅಭಿವೃದ್ಧಿಯಾಗುತ್ತದೆ ಎಂದು ಅರ್ಥೈಸಲಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲ್ಯದಲ್ಲಿ ಮಿದುಳಿನ ಬೆಳವಣಿಗೆ ಕುಂಠಿತಕ್ಕೆ ಬಡತನ ಕಾರಣ: ಓದುವಿಕೆಯೇ ಇದಕ್ಕೆ ಔಷಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.