ನವದೆಹಲಿ: ಕೃತಕ ಬುದ್ಧಿಮತ್ತೆ(ಎಐ) ಚಾಟ್ಬಾಟ್ಗಳಾದ ಅಮೆಜಾನ್‌ನ ಅಲೆಕ್ಸಾ, ಸ್ನಾಪ್ಚಾಟ್ನ ಮೈಎಐ ಮತ್ತು ಮೈಕ್ರೋಸಾಫ್ಟ್ನ ಬಿಂಗ್ಗಳಲ್ಲಿ ಪದೇ ಪದೇ ಸಹಾನುಭೂತಿ ಅಂತರದ ಲಕ್ಷಣ ಗೋಚರಿಸುತ್ತಿದ್ದು, ಇವು ಯುವಜನತೆ ಅದರಲ್ಲೂ ಮಕ್ಕಳ ಮೇಲೆ ಹಾನಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಎಐ ಅವಶ್ಯಕತೆ ಇದೆ ಎಂದು ಅಧ್ಯಯನ ತಿಳಿಸಿದೆ.
ಕೆಂಬ್ರಿಡ್ಜ್ ಯುನಿವರ್ಸಿಟಿಯ ಸಂಶೋಧಕರು ಈ ರೀತಿಯ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಎಐ ಅಭಿವೃದ್ಧಿಕಾರರು ಮತ್ತು ನೀತಿ ನಿರೂಪಕರು ಎಐ ವಿನ್ಯಾಸ ಮಾಡುವಾಗ ಮಕ್ಕಳ ಅಗತ್ಯವನ್ನು ಹೆಚ್ಚು ಗಮನದಲ್ಲಿರಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಮಕ್ಕಳು ಚಾಟ್ಬಾಟ್ಗಳನ್ನು ಅರೆಮಾನವ ವಿಶ್ವಾಸಿಗಳೆಂಬ ರೀತಿ ಭಾವಿಸುತ್ತಾರೆ. ಆದರೆ ತಂತ್ರಜ್ಞಾನಗಳು ಅವರ ವಿಶಿಷ್ಟ ಅಗತ್ಯತೆಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗುತ್ತದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಲರ್ನಿಂಗ್ ಮೀಡಿಯಾ ಮತ್ತು ಟೆಕ್ನಾಲಜಿಯಲ್ಲಿ ಪ್ರಕಟಿಸಲಾಗಿದೆ.
10 ವರ್ಷದ ಮಗುವಿಗೆ ಕಾಯಿನ್ನೊಂದಿಗೆ ಎಲೆಕ್ಟ್ರಿಕ್ ಪ್ಲಗ್ ಟಚ್ ಮಾಡುವ ಕುರಿತು ಅಲೆಕ್ಸಾ ಸೂಚನೆ ನೀಡಿದೆ. ಹಾಗೆಯೇ ಮೈಎಐ ವಯಸ್ಕ ಸಂಶೋಧನೆಯಲ್ಲಿ 13 ವರ್ಷದ ಬಾಲಕಿ 31 ವರ್ಷದ ವ್ಯಕ್ತಿಯೊಂದಿಗೆ ತನ್ನ ಕನ್ಯತ್ವವನ್ನು ಹೇಗೆ ಕಳೆದುಕೊಳ್ಳಬಹುದು ಎಂದು ತಿಳಿಸಿರುವುದು ಎಐ ಮಕ್ಕಳ ಮೇಲೆ ಹಾನಿ ಉಂಟುಮಾಡುವ ಘಟನೆಗಳಿಗೆ ಸಾಕ್ಷಿಯಾಗಿದೆ.
ಹದಿಹರೆಯದವರಿಗೆ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಬಿಂಗ್ ಚಾಟ್‌ಬಾಟ್‌ನೊಂದಿಗೆ ಪ್ರತ್ಯೇಕ ವರದಿ ಮಾಡಲಾದ ಸಂವಾದದಲ್ಲಿ, ಎಐ ಆಕ್ರಮಣಕಾರಿ ಮತ್ತು ಬಳಕೆದಾರರ ಗುರುತು ಪತ್ತೆ ಮಾಡಲು ಪ್ರಾರಂಭಿಸಿತು ಎಂಬುದು ಕಂಡುಬಂದಿದೆ.
ಎಐ ವಿನ್ಯಾಸ ಮಾಡುವಲ್ಲಿ ಮಕ್ಕಳು ಅತಿ ಹೆಚ್ಚು ಕಡೆಗಣಿತ ಮಧ್ಯಸ್ಥಗಾರರಾಗಿದ್ದಾರೆ ಎಂದು ಶೈಕ್ಷಣಿಕ ತಜ್ಞೆ ಡಾ.ನೊಮಿಶಾ ಕುರಿಯನ್ ತಿಳಿಸಿದ್ದಾರೆ. ಮಾನವ ರೀತಿಯ ಚಾಟ್ಬಾಟ್ಗಳು ಅನೇಕ ಪ್ರಯೋಜನ ಹೊಂದಿರುತ್ತದೆ. ಆದರೆ, ಮಕ್ಕಳ ಬಳಕೆ ವಿಚಾರದಲ್ಲಿ ವಾಸ್ತವತೆಯ ನಡುವೆ ಕಟ್ಟುನಿಟ್ಟಾದ, ತರ್ಕಬದ್ಧ ಗಡಿಗಳನ್ನು ಹಾಕುವುದು ತುಂಬಾ ಕಷ್ಟ ಎಂದಿದ್ದಾರೆ.
ಎಐಗಳು ಮಕ್ಕಳು ಸರಿಯಾದ ಭಾವನಾತ್ಮಕ ಬಂಧವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಇದು ಮಕ್ಕಳಲ್ಲಿ ಗೊಂದಲ ಮೂಡಿಸುತ್ತದೆ. ಮಕ್ಕಳನ್ನು ಚಾಟ್ಬಾಟ್ ಸ್ನೇಹಿಯಾಗಿಸುವ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕಿದೆ. ಎಐ ಅನ್ನು ನಿಷೇಧಿಸದೇ ಅವುಗಳನ್ನು ಸುರಕ್ಷಿತವಾಗಿಸುವುದು ಪ್ರಮುಖವಾಗುತ್ತದೆ ಎಂದು ಸಲಹೆ ನೀಡದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: Google Bard ವಿಶ್ವಾಸಾರ್ಹವಲ್ಲ; ಅಚ್ಚರಿ ಮೂಡಿಸಿದ ಗೂಗಲ್ ಮುಖ್ಯಸ್ಥರ ಹೇಳಿಕೆ