ಉಡುಪಿ: ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶನಿವಾರ ಕಳ್ಳತನ ನಡೆದಿದೆ. ಕೆಲ ತಿಂಗಳ ಹಿಂದಷ್ಟೇ ಕೋಟ್ಯಂತರ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿದ್ದ ಈ ದೇಗುಲದಲ್ಲಿ ಅಂದಾಜು 40 ಸಾವಿರ ರೂ.ಗಳಿಗೂ ಅಧಿಕ ನಗದು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಬಾಗಿಲ ಚಿಲಕದ ಸ್ಕ್ರೂ ತೆಗೆದು ಒಳಗೆ ಪ್ರವೇಶಿಸಿದ ಕಳ್ಳನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಪ್ಪಲಿ ಹಾಕಿಕೊಂಡೇ ದೇವಸ್ಥಾನ ಪ್ರವೇಶಿಸಿದ ಖದೀಮ ದೇವರಿಗೆ ಕೈ ಮುಗಿದು, ತಿಲಕವಿಟ್ಟುಕೊಂಡ ಬಳಿಕ ಕಾಣಿಕೆ ಡಬ್ಬಿ ಒಡೆದು ಹಣ ಎಗರಿಸಿದ್ದಾನೆ.
ಘಟನಾ ಸ್ಥಳಕ್ಕೆ ಕುಂದಾಪುರ ಪ್ರಭಾರ ವೃತ್ತನಿರೀಕ್ಷಕ ಜಯರಾಮ ಡಿ.ಗೌಡ, ಪ್ರಭಾರ ಪಿಎಸ್ಐ ನೂತನ ಗೌಡ, ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣದಲ್ಲಿ, ಇಸ್ಪಿಟ್ ಆಡುತ್ತಿದ್ದ 8 ಮಂದಿಯನ್ನು ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕರ್ಕುಂಜೆ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, 7,320 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.