ETV Bharat / snippets

ಬೆಂಗಳೂರು: ಹಣ ಕದ್ದು ಹಂಚಿಕೊಂಡಿದ್ದ ಅಕ್ಕ - ತಮ್ಮನ ಬಂಧನ

ಕಳ್ಳತನ ಪ್ರಕರಣ
ಕಳ್ಳತನ ಪ್ರಕರಣ (ETV Bharat)
author img

By ETV Bharat Karnataka Team

Published : May 28, 2024, 5:51 PM IST

ಬೆಂಗಳೂರು: ಹಣ ಕದ್ದು ಹಂಚಿಕೊಂಡಿದ್ದ ಅಕ್ಕ ತಮ್ಮನನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ಮೂಲದ ಬಂಧಿತ ಆನಂದ್ ಹಾಗೂ ಗಾಯಿತ್ರಿಯಿಂದ 4.78 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 1ರಂದು ಎಕ್ಸಾಸ್ಟಿಂಗ್ ಫ್ಯಾನ್‌ ಬಿಚ್ಚಿ ಬಸವೇಶ್ವರ ನಗರದ ಮದರ್ ಡಯಾಗ್ನಾಸ್ಟಿಕ್ ಸೆಂಟರ್‌ಗೆ ನುಗ್ಗಿದ್ದ ಆನಂದ್, 8.20 ಲಕ್ಷಕ್ಕೂ ಅಧಿಕ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ. ಬಸವೇಶ್ವರ ನಗರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಆನಂದ್​​ನನ್ನು ಬಂಧಿಸಿ 28 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದರು. ಕದ್ದ ಹಣದಲ್ಲಿ 5 ಲಕ್ಷ ರೂ. ಹಣವನ್ನ ತನ್ನ ಅಕ್ಕ ಗಾಯಿತ್ರಿಗೆ ನೀಡಿರುವುದಾಗಿ ತನಿಖೆ ವೇಳೆ ಆನಂದ್ ಬಾಯ್ಬಿಟ್ಟಿದ್ದ. ಅದರಂತೆ ಆರೋಪಿ ಗಾಯತ್ರಿಯನ್ನು ಬಂಧಿಸಿ, 4.50 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಇದನ್ನೂ ಓದಿ: ಅಕ್ಕನ ಮನೆಯಲ್ಲಿ ₹65 ಲಕ್ಷದ ನಗ, ನಾಣ್ಯ ದೋಚಿದ್ದ ತಂಗಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.