ETV Bharat / snippets

ಧಾರವಾಡದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ: ರೌಡಿಗಳ ಮನೆ ಮೇಲೆ ಪೊಲೀಸ್​ ದಾಳಿ

author img

By ETV Bharat Karnataka Team

Published : May 30, 2024, 12:57 PM IST

ರೌಡಿಗಳ ಮನೆ ಮೇಲೆ ಪೊಲೀಸ್​ ದಾಳಿ
ರೌಡಿಗಳ ಮನೆ ಮೇಲೆ ಪೊಲೀಸ್​ ದಾಳಿ (ETV Bharat)

ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೊಲೆ ಸುಲಿಗೆ ಪ್ರಕರಣಗಳನ್ನು ಮಟ್ಟ ಹಾಕಲು ಪೊಲೀಸರು ನಿರತರಾಗಿದ್ದಾರೆ. ಇಂದು ಧಾರವಾಡದ ಮೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ವಿದ್ಯಾಗಿರಿ ಪೊಲೀಸ್​ ಠಾಣೆ, ಶಹರ್​ ಪೊಲೀಸ್​ ಠಾಣೆ ಹಾಗೂ ಉಪನಗರ ಪೊಲೀಸ್​ ಠಾಣೆಯ ಅಧಿಕಾರಿಗಳು ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಎಸಿಪಿ ಬಸವರಾಜ್ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ರೌಡಿಗಳ ಮನೆಗೆ ಹೋಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮೂರು ಠಾಣೆಗಳ ವ್ಯಾಪ್ತಿಯ ರೌಡಿಗಳಿಗೆ ಎಚ್ಚರಿಕೆ ಕೊಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಸದಂತೆ ಸೂಚಿಸಲಾಗಿದೆ. ಅಪರಾಧ ಹೆಚ್ಚುತ್ತಿದ್ದು, ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ರೌಡಿಗಳ ಮೈಚಳಿ ಬಿಡಿಸಿದ್ದಾರೆ.

ಇದನ್ನೂ ಓದಿ: ಪಾಲಿಕೆ ಸದಸ್ಯನ ಕೊಲೆ ಯತ್ನ ಕೇಸ್: 8 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.