ETV Bharat / snippets

ಬೆಳ್ತಂಗಡಿ: ಕಾಡಿನಲ್ಲಿ ದಂಪತಿ ಆತ್ಮಹತ್ಯೆ

couple suicide
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Sep 20, 2024, 4:59 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕಾಶಿಪಟ್ಣ ಗ್ರಾಮ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಹಾಗೂ ಅವರ ಪತ್ನಿ ಬೇಬಿ (46) ಆತ್ಮಹತ್ಯೆ ಮಾಡಿಕೊಂಡವರು.

ದಂಪತಿ ಮನೆಯ ಸಮೀಪದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನೊಣಯ್ಯ ಪೂಜಾರಿ ಹಾಗೂ ಪತ್ನಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನೋಣಯ್ಯ ಪೂಜಾರಿಯವರಿಗೆ ಇದು 2ನೇ ಮದುವೆಯಾಗಿತ್ತು. ಅವರ ಮೊದಲ ಪತ್ನಿ 10 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಕೆಲವು ವರ್ಷಗಳ ಹಿಂದೆ ಅವರು ಬೇಬಿಯವರನ್ನು 2ನೇ ವಿವಾಹವಾಗಿದ್ದರು. ಮೊದಲನೇ ಪತ್ನಿಗೆ ಐವರು ಪುತ್ರರು, ಓರ್ವ ಪುತ್ರಿ ಇದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಯಚೂರು: ಕುರಿಗಳ ಮೇಲೆ ಹರಿದ ಖಾಸಗಿ ಬಸ್ - 150 ಕುರಿಗಳು ಸಾವು - Private Bus hit Sheep

ETV Bharat Logo

Copyright © 2024 Ushodaya Enterprises Pvt. Ltd., All Rights Reserved.