ETV Bharat / snippets

ಕಸಾಯಿಖಾನೆಗೆ ಸಾಗಿಸುತ್ತಿದ್ದ 38 ಜಾನುವಾರು ರಕ್ಷಣೆ: 9 ಮಂದಿ ಬಂಧನ

CATTLE RESCUE
ಜಾನುವಾರುಗಳ ರಕ್ಷಣೆ (ETV Bharat)
author img

By ETV Bharat Karnataka Team

Published : Jul 30, 2024, 10:59 AM IST

ಚಾಮರಾಜನಗರ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 38 ಜಾನುವಾರುಗಳನ್ನು ಸಂತೇಮರಹಳ್ಳಿ ಪೊಲೀಸರು ಸೋಮವಾರ ರಕ್ಷಿಸಿದ್ದಾರೆ. ಚಂದ್ರು, ಮಣಿಕಂಠ, ಅಜಿತ್, ಸಲ್ಮಾನ್, ಸಮೃದ್ಧ್, ಸಿದ್ದೇಶ್, ಮುಜಾವಿದ್ ಸೇರಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ.

ಟಿ.ನರಸೀಪುರದ ಮೂಲಕ ತಮಿಳುನಾಡಿನ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಸಂತೇಮರಹಳ್ಳಿ ಸಿಪಿಐ ಬಸವರಾಜು ನೇತೃತ್ವದ ತಂಡ ದಾಳಿ ನಡೆಸಿ ಹಸು, ಕರು, ಎಮ್ಮೆ ಸೇರಿ 38 ಜಾನುವಾರುಗಳನ್ನು ರಕ್ಷಿಸಿದ್ದಾರೆ.

7 ಟಾಟಾ ಏಸ್ ವಾಹನದಲ್ಲಿ ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ತಮಿಳುನಾಡಿಗೆ ಜಾನುವಾರು ಸಾಗಿಸಲಾಗುತ್ತಿತ್ತು. ಆರೋಪಿಗಳ ವಿರುದ್ದ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬುಲೆಟ್, ಪಲ್ಸರ್ ಕಳ್ಳತನ: ಇಬ್ಬರ ಬಂಧನ, ₹30 ಲಕ್ಷ ಮೌಲ್ಯದ 16 ಬೈಕ್ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.