ETV Bharat / snippets

ಉಡುಪಿಯಲ್ಲಿ ಅಗ್ನಿ ಅವಘಡ: ಬಾರ್ & ರೆಸ್ಟೋರೆಂಟ್‌ ಮಾಲೀಕ ಸಾವು, ಪತ್ನಿ ಗಂಭೀರ

author img

By ETV Bharat Karnataka Team

Published : Jul 15, 2024, 3:49 PM IST

BAR AND RESTAURANT OWNER DIED  FIRE ACCIDENT AT UDUPI  FIRE BRIGADE STAFF  UDUPI
ಉಡುಪಿ: ಅಗ್ನಿ ಅವಘಡ: ಬಾರ್ & ರೆಸ್ಟೋರೆಂಟ್‌ ಮಾಲೀಕ ಸಾವು, ಪತ್ನಿ ಗಂಭೀರ (ETV Bharat)

ಉಡುಪಿ: ನಗರದ ಬಾರ್ ಮಾಲೀಕರೊಬ್ಬರ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಬಾರ್ ಮಾಲೀಕ ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಉಡುಪಿ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಬಾರ್ ಮಾಲೀಕ ರಮಾನಂದ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಅವರ ಪತ್ನಿ ಅಶ್ವಿನಿ ಅವರಿಗೂ ಗಂಭೀರ ಗಾಯವಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯೊಳಗೆ ಮತ್ತಿಬ್ಬರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ‌ ಎಂದು ಅಗ್ನಿಶಾಮಕ ದಳದವರು ಮಾಹಿತಿ ನೀಡಿದರು. ಈ ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಓದಿ: ರಾಜ್ಯದಲ್ಲಿ ಇನ್ನೂ ಕಡಿಮೆ ಆಗದ ಡೆಂಗ್ಯೂ ಜ್ವರ ಏರಿಕೆ ಪ್ರಮಾಣ; ಮತ್ತೆ 445 ಪಾಸಿಟಿವ್ ಪ್ರಕರಣಗಳು ಪತ್ತೆ - Dengue Fever

ETV Bharat Logo

Copyright © 2024 Ushodaya Enterprises Pvt. Ltd., All Rights Reserved.