ETV Bharat / snippets

ಎರಡು ಬೈಕ್​ಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ

author img

By ETV Bharat Karnataka Team

Published : Aug 27, 2024, 9:04 AM IST

TWO BIKES ACCIDENT
ಎರಡು ಬೈಕ್​ಗಳ ಮುಖಾಮುಖಿ ಡಿಕ್ಕಿ (ETV Bharat)

ಹುಬ್ಬಳ್ಳಿ: ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್​ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿ-ಗದಗ ರಸ್ತೆಯಲ್ಲಿನ ಬಂಡಿವಾಡ ಬಳಿ ನಡೆದಿದೆ. ಶಂಕರ ಕೊರವರ ಮೃತ ಬೈಕ್​ ಸವಾರ. ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಎರಡೂ ಬೈಕ್​ಗಳು ಜಖಂಗೊಂಡಿವೆ.

ಡಿಕ್ಕಿ ರಭಸಕ್ಕೆ ಮಂಟೂರು ಗ್ರಾಮದ ನಿವಾಸಿ ಬೈಕ್ ಸವಾರ ಶಂಕರ ಕೊರವರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನೊಂದು ಬೈಕ್​ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳು ಮೂವರು ನಾಗರಳ್ಳಿ ಗ್ರಾಮದವರಾಗಿದ್ದಾರೆ. ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎನ್ನಲಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರ ದಾಖಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಹಾಸನದಲ್ಲಿ ಐಷಾರಾಮಿ ಕಾರು ಅವಾಂತರ, 17 ವಾಹನಗಳು ಜಖಂ; ಬೆಳಗಾವಿಯಲ್ಲಿ ಟ್ಯಾಂಕರ್‌​ ಪಲ್ಟಿ, 14 ಜನರಿಗೆ ಗಾಯ - Road Accidents

ETV Bharat Logo

Copyright © 2024 Ushodaya Enterprises Pvt. Ltd., All Rights Reserved.