ETV Bharat / snippets

ಬಾಗಲಕೋಟೆ: ಮೀನಿಗೆ ಹಾಕಿದ್ದ ಬಲೆಗೆ ಮೀನುಗಾರ ಬಲಿ; ಮಗಳ ಎದುರಲ್ಲೇ ನೀರಲ್ಲಿ ಮಳುಗಿ ಸಾವು

Bagalkote Fisherman Death
ಬಾಗಲಕೋಟೆ ಮೀನುಗಾರ ಸಾವು (ETV Bharat)
author img

By ETV Bharat Karnataka Team

Published : Jun 15, 2024, 9:20 AM IST

ಬಾಗಲಕೋಟೆ: ರಬಕವಿ - ಬನಹಟ್ಟಿಯ ಕುಲಹಳ್ಳಿಯಲ್ಲಿ ಮೀನು ಹಿಡಿಯಲು ಹೋದ ಬಾವುಸಾಬ ಬಾಗಡೆ (42) ಮೃತಪಟ್ಟಿದ್ದಾರೆ. ಮೀನಿನ ಬಲೆ ಕಾಲಿಗೆ ಸಿಲುಕಿ, ಕೃಷ್ಣಾ ನದಿಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಬಾವುಸಾಬ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಮೀಪದ ಮಹಿಷವಾಡಗಿ ಸೇತುವೆ ಬಳಿ ಮೀನು ಹಿಡಿಯಲು ಹೋಗಿದ್ದರು. ಹಿಂದಿನ ದಿನ ಬಲೆ ಹಾಕಿದ್ದರು. ಮರುದಿನ ಬಲೆ ತೆಗೆಯುವ ವೇಳೆ ಕಾಲಿಗೆ ಸಿಲುಕಿದ ಪರಿಣಾಮ, ನೀರಲ್ಲಿ ಮಳುಗಿ ಸಾವನ್ನಪ್ಪಿದ್ದಾರೆ. ಈಜುಗಾರರ ತಂಡ, ಅಗ್ನಿ ಶಾಮಕದಳದ ಸಹಾಯದಿಂದ ಶವಕ್ಕಾಗಿ ಶೋಧ ನಡೆಯುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಗಳ ಎದುರೆ ಸಾವು: 10 ವರ್ಷದ ಬಾಲಕಿ ತಂದೆಯೊಂದಿಗೆ ನದಿ ಬಳಿ ಬಂದಿದ್ದಾಳೆ. ಮೀನಿಗೆ ಹಾಕಿದ ಬಲೆಯನ್ನು ತರುವುದಾಗಿ ತಿಳಿಸಿದ ಬಾವುಸಾಬ, ನದಿ ತೀರದಲ್ಲಿ ಕಾಯುವಂತೆ ಮಗಳಿಗೆ ತಿಳಿಸಿದ್ದಾರೆ. ಬಲೆ ತೆಗೆಯುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾರೆ. ನಿಸ್ಸಾಹಯಕಳಾದ ಮಗಳ ಕಣ್ಮುಂದೆಯೇ ತಂದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.