ETV Bharat / snippets

ತೆಲಂಗಾಣದ ಕಡೆಂ ಅರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ: ಏನಿದರ ವಿಶೇಷತೆ!

author img

By ETV Bharat Karnataka Team

Published : Jun 19, 2024, 12:55 PM IST

ಅಪರೂಪದ ಕಪ್ಪೆ ಪತ್ತೆ
ಅಪರೂಪದ ಕಪ್ಪೆ ಪತ್ತೆ (ETV Bharat)

ನಿರ್ಮಲ್​: ಪ್ರಾಣಿ ಪ್ರಪಂಚವೇ ಒಂದು ವಿಸ್ಮಯ. ಮೊಗೆದಷ್ಟೂ ಅದು ವಿಸ್ತೃತವೇ. ತೆಲಂಗಾಣದ ನಿರ್ಮಲ್​ ಎಂಬ ಜಿಲ್ಲೆಯ ಕಡೆಂ ಮಂಡಲದ ಉಡುಂಪುರ್ ವ್ಯಾಪ್ತಿಯ ಪೆದ್ದವಾಗು ಸಮೀಪದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಅಪರೂಪದ ಕಪ್ಪೆಯೊಂದು ಪತ್ತೆ ಆಗಿದೆ. ಇಲ್ಲಿಯ ಕವ್ವಾಲ್ ಹುಲಿ ಸಂರಕ್ಷಣಾ ವ್ಯಾಪ್ತಿಯಲ್ಲಿ ಡಿಆರ್‌ಒ ಪ್ರಕಾಶ್ ಮತ್ತು ಎಫ್‌ಬಿಒ ಪ್ರಸಾದ್ ಎಂಬುವವರು ಗಸ್ತು ತಿರುಗುತ್ತಿದ್ದಾಗ ಈ ಕಪ್ಪೆ ಕಂಡು ಬಂದಿದೆ. ಅಪರೂಪದ ಕಪ್ಪೆಯ ಚಿತ್ರವನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಇಂಡಿಯನ್ ​ಪೇಂಟೆಡ್​ ಫ್ರಾಗ್​ ಮತ್ತು ಶ್ರೀಲಂಕಾ ಬುಲ್‌ಫ್ರಾಗ್ ಎಂದು ಕರೆಯಲಾಗುತ್ತದೆ. ಇದು ಕೆಲವೇ ಪ್ರದೇಶಗಳಲ್ಲಿ ಕಂಡು ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಪ್ಪೆಗಳು ಬೇಸಿಗೆ ಸಮಯದಲ್ಲಿ ತಂಪಾದ ಸ್ಥಳಗಳಲ್ಲಿ ಮಣ್ಣಿನೊಳಗೆ ಅಡಗಿಕೊಳ್ಳುತ್ತವೆ. ಮಳೆಗಾಲ ಆರಂಭವಾದ ಬಳಿಕ ಮೊಟ್ಟೆಗಳನ್ನು ಇಡಲು ಮಾತ್ರ ಹೊರಬರುತ್ತವೆ.

ಇದನ್ನೂ ಓದಿ: ಗಂಡು - ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಪ್ರಭೇದದ 'ಮ್ಯೂಸಿಕ್​ ಕಪ್ಪೆ' ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.