ನ್ಯೂಯಾರ್ಕ್(ಯುಎಸ್): ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಾಪ್ಸ್(BAPS) ಸ್ವಾಮಿ ನಾರಾಯಣ ದೇಗುಲದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಖಂಡಿಸಿರುವ ಭಾರತೀಯ ಕಾನ್ಸುಲೇಟ್ ಜನರಲ್, ಇಂಥ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಘಟನೆಯ ಕುರಿತು ಕಾನ್ಸುಲೇಟ್ ಜನರಲ್ ಅಧಿಕಾರಿಗಳು ಯುಎಸ್ ಕಾನೂನು ಜಾರಿ ಪ್ರಾಧಿಕಾರಗಳಿಗೆ ದೂರು ನೀಡಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
The vandalism of the BAPS Swaminarayan Temple in Melville, New York, is unacceptable ; The Consulate @IndiainNewYork is in touch with the community and has raised the matter with U.S. law enforcement authorities for prompt action against the perpetrators of this heinous act.…
— India in New York (@IndiainNewYork) September 16, 2024
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಾಪ್ಸ್ ಸ್ವಾಮಿ ನಾರಾಯಣ ದೇಗುಲದ ಮೇಲಿನ ದಾಳಿ ಒಪ್ಪುವಂಥದ್ದಲ್ಲ. ಕಾನ್ಸುಲೇಟ್ ಕಚೇರಿ ಹಿಂದೂ ಸಮುದಾಯದ ಜೊತೆ ಸಂಪರ್ಕದಲ್ಲಿದೆ. ಈ ವಿಷಯವನ್ನು ಯುಎಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಂಥ ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಅಮೆರಿಕನ್ ಹಿಂದೂ ಫೌಂಡೇಷನ್ ದೇಗುಲದ ಮೇಲಿನ ದಾಳಿ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಯುಎಸ್ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.
Deeply saddened by the desecration of our BAPS Mandir in Melville, NY, an act aimed at inciting hatred against Hindus. Today, local, state & federal leaders gathered to promote peace, respect & unity. Guided by our faith, we stand united against hate with compassion & solidarity. pic.twitter.com/ERvM1m1AZF
— BAPS Public Affairs (@BAPS_PubAffairs) September 16, 2024
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, 'ಈ ವಾರಾಂತ್ಯದಲ್ಲಿ ಮೆಲ್ವಿಲ್ಲೆ ಸಮೀಪದ ನಾಸ್ಸೌ ಕೌಂಟಿಯಲ್ಲಿ ಹಿಂದೂ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಸೇರುವ ಕಾರ್ಯಕ್ರಮ ಇರುವುದರಿಂದ ಹಿಂದೂ ಸಂಸ್ಥೆಗಳ ಮೇಲೆ ದಾಳಿ ಬೆದರಿಕೆ ಆತಂಕ ವ್ಯಕ್ತವಾಗಿತ್ತು' ಎಂದು ತಿಳಿಸಿದೆ. ಇದರ ಜೊತೆಗೆ, 'ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗೆ ವಿಡಿಯೋ ಮೂಲಕ ಹಿಂದೂಗಳು ಮತ್ತು ಹಿಂದೂ ಸಂಸ್ಥೆಗಳ ಮೇಲೆ ಬೆದರಿಕ ಹಾಕಿದ್ದ' ಎಂದು ತಿಳಿಸಿದೆ. 'ನ್ಯೂಯಾರ್ಕ್‌ನಲ್ಲಿರುವ ದೇಗುಲದ ಮೇಲೆ ನಡೆದ ದಾಳಿಯು ಈ ಹಿಂದೆ ಕ್ಯಾಲಿಫೋರ್ನಿಯಾ ಮತ್ತು ಕೆನಡಾದಲ್ಲಿ ನಡೆದ ದಾಳಿಗಳೊಂದಿಗೆ ಸಾಮ್ಯತೆ ಹೊಂದಿದೆ' ಎಂದು ತಿಳಿಸಿದೆ.
The @TheJusticeDept & @DHSgov must investigate this attack on the @BAPS Hindu temple in Melville, NY shared by @OnTheNewsBeat after recent threats to Hindu institutions as a large Indian community gathering is planned in nearby Nassau County this weekend.
— Hindu American Foundation (@HinduAmerican) September 16, 2024
pic.twitter.com/S52x8yPNs8
ಕಳೆದ ಜುಲೈನಲ್ಲಿ ಕೆನಡಾದ ಎಡ್ಮಾಂಟನ್‌ನಲ್ಲಿರುವ ಬಾಪ್ಸ್ ಸ್ವಾಮಿ ನಾರಾಯಣ ಮಂದಿರದ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದು, ಭಾರತೀಯ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಅಮೆರಿಕದಲ್ಲಿ ದಾಳಿ ಮರುಕಳಿಸಿದೆ.
ಇದನ್ನೂ ಓದಿ: ಪಪುವಾ ನ್ಯೂ ಗಿನಿಯಾದಲ್ಲಿ ಬುಡಕಟ್ಟು ಜನರ ಸಂಘರ್ಷ: 20 ಸಾವು, 5 ಸಾವಿರ ಜನರ ಪಲಾಯನ - Papua New Guinea Clashes