ಫೈನಲ್ನಲ್ಲಿ ಕೊಹ್ಲಿ ಫಾರ್ಮಗೆ ಬರ್ತಾರೆ, ಕಪ್ ಗೆದ್ದೇ ಗೆಲ್ತೀವಿ: ಟೀಂ ಇಂಡಿಯಾಕ್ಕೆ ಚಿಣ್ಣರು, ಯುವಕರಿಂದ ಶುಭ ಹಾರೈಕೆ - state youths wishes to team india - STATE YOUTHS WISHES TO TEAM INDIA
🎬 Watch Now: Feature Video
Published : Jun 29, 2024, 2:01 PM IST
ಬೆಂಗಳೂರು: ಟಿ-20 ವಿಶ್ವಕಪ್ನಲ್ಲಿ ಅಜೇಯವಾಗಿ ಫೈನಲ್ಗೆ ತಲುಪಿರುವ ಭಾರತ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ ಗೆಲ್ಲಲಿ ಎಂದು ರಾಜ್ಯದ ಯುವಕರು ಶುಭ ಕೋರಿದ್ದಾರೆ. ಶಾಲಾ - ಕಾಲೇಜುಗಳಲ್ಲಿ ಭಾರತದ ಧ್ವಜ ಹಿಡಿದು ಟೀಂ ಇಂಡಿಯಾಗೆ ವಿಶ್ ಮಾಡಲಾಗಿದೆ. ಜೊತೆಗೆ ದೇವಾಸ್ಥಾನಗಳಲ್ಲಿ ಭಾರತದ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿ ಟ್ರೋಫಿ ಗೆಲ್ಲಲ್ಲಿ ಎಂದು ಹಾರೈಸಿದ್ದಾರೆ.
ದಾವಣಗೆರೆ ಯುವಕರು ಮಾತನಾಡಿ, ಈ ಸಲ ಕಪ್ ನಮ್ದೆ, ಬ್ಯಾಟಿಂಗ್ ವಿಭಾಗದಲ್ಲೂ ಭಾರತ ಬಲಿಷ್ಠವಾಗಿದೆ. ಕೊಹ್ಲಿ ಫಾರ್ಮ್ಗೆ ಬಂದರೆ ಇನ್ನೂ ಹೆಚ್ಚಿನ ರನ್ಗಳು ಬರಬಹುದಾಗಿದೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಲಿ ಭಾರತ ಗೆಲ್ಲಲಿ ಎಂದು ಶುಭ ಕೋರಿದರು. ದಾವಣಗೆರೆ ಕ್ರಿಕೆಟ್ ಅಕಾಡೆಮಿ ಕೋಚ್ ತಿಮ್ಮೇಶ್ ಮಾತನಾಡಿ, ಈ ಸಲ ಕಪ್ ನಮ್ದೆ, ಬ್ಯಾಟಿಂಗ್ ವಿಭಾಗದಲ್ಲೂ ಭಾರತ ಬಲಿಷ್ಠವಾಗಿದೆ. ಕೊಹ್ಲಿ ಫಾರ್ಮ್ಗೆ ಬಂದ್ರೆ ಇನ್ನೂ ಹೆಚ್ಚಿನ ರನ್ ನಿರೀಕ್ಷಿಸಬಹುದು ಎಂದು ಶುಭ ಕೋರಿದರು.
ಮಂಗಳೂರಿನ ಯುವಕರು ಮಾತನಾಡಿ, ಇಂದಿನ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಲಿದ್ದಾರೆ. ಉತ್ತಮವಾದ ತಂಡ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದಾರೆ.
ಮೈಸೂರಿನಿಂದಲೂ ಶುಭಕೋರಿರುವ ಯುವಕರು, ಟೀಂ ಇಂಡಿಯಾ ಅತ್ಯುತ್ತಮ ಫಾರ್ಮನಲ್ಲಿದೆ. ಅದರಲ್ಲೂ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಉಳಿದಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾಕ್ಕಿಂತಲೂ ಭಾರತ ಬಲಿಷ್ಠವಾಗಿದೆ ಹಾಗಾಗಿ ಈ ಬಾರಿ ಭಾರತ ಕಪ್ನೊಂದಿಗೆ ಮರಳಲಿ ಎಂದು ಹಾರೈಸಿದ್ದಾರೆ.
ಚಾಮರಾಜನಗರದ ಯುವಕರು ಈಟಿವಿ ಭಾರತದೊಂದಿಗೆ ಮಾತನಾಡಿ, 10 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ಫೈನಲ್ಗೆ ಪ್ರವೇಶ ಮಾಡಿದೆ. ಈ ಬಾರಿ ಭಾರತ ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿದ್ದು ಕಪ್ ಗೆಲ್ಲಲಿದೆ. ವಿಶ್ವಕಪ್ ಗೆದ್ದ ಬಾ ಇಂಡಿಯಾ ಎಂದು ಶುಭ ಕೋರಿದ್ದಾರೆ.
ಬೆಳಗಾವಿಯ ಕ್ರಿಕೆಟ್ ಅಭಿಮಾನಿಗಳು ಮಾತನಾಡಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡು ಬಲಿಷ್ಠ ತಂಡಗಳು. ಹಾಗಾಗಿ, ವಿರಾಟ್ ಕೊಹ್ಲಿ ಉತ್ತಮವಾಗಿ ಆಡಬೇಕು. ಅವರು ಸೆಂಚೂರಿ, ಹಾಫ್ ಸೆಂಚೂರಿ ಹೊಡೆದರೆ ತಂಡದ ಮೊತ್ತ 200ರ ಗಡಿ ದಾಟುತ್ತದೆ. ಅದೇ ರೀತಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಾ, ಸೂರ್ಯಕುಮಾರ ಯಾದವ್ ಕೂಡ ಸಾಥ್ ಕೊಟ್ಟು, ಎಲ್ಲಾ ಬೌಲರ್ಗಳು ಬೇಗನೇ ವಿಕೆಟ್ ತೆಗೆದರೆ ಖಂಡಿತವಾಗಲೂ ಭಾರತ ಗೆಲ್ಲುತ್ತದೆ ಎಂದು ಅಭಿಪ್ರಾಪಟ್ಟರು.
ಇದನ್ನೂ ಓದಿ: ವಿಂಡೀಸ್, ಇಂಗ್ಲೆಂಡ್ ಬಳಿಕ ಭಾರತಕ್ಕೆ 2ನೇ ಬಾರಿ T-20 ವಿಶ್ವ ಚಾಂಪಿಯನ್ ಆಗುವ ಅವಕಾಶ - T20 world champion