ಚಿಕ್ಕಮಗಳೂರು: ಹೆದ್ದಾರಿಯಲ್ಲಿ 'ಗಜ' ಸಂಚಾರ; ಆತಂಕ ಸೃಷ್ಟಿಸಿದ ಕಾಡಾನೆ - Wild Elephant - WILD ELEPHANT
🎬 Watch Now: Feature Video
Published : Apr 1, 2024, 7:54 PM IST
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಮುಂದುವರೆದಿದ್ದು, ಜನರಿಗೆ ಆಗಾಗ ಆತಂಕ ಸೃಷ್ಟಿಸುತ್ತಲೇ ಇವೆ. ಕಾಫಿ, ಅಡಿಕೆ ತೋಟಗಳು ಸೇರಿದಂತೆ ಇತರ ಬೆಳೆಗಳನ್ನು ನಾಶ ಮಾಡುತ್ತಿದ್ದ ಕಾಡಾನೆಗಳು ರಸ್ತೆಗಳಲ್ಲಿಯೂ ಜನರು, ವಾಹನ ಸವಾರರಿಗೆ ಭೀತಿ ಮೂಡಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡು ಕಿರಿಕಿರಿ ಉಂಟು ಮಾಡಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾಡಿನಿಂದ ಬಂದ ಒಂಟಿ ಸಲಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿದ್ದು, ವಾಹನ ಸವಾರರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಅಡ್ಡಾಡಿದ ಕಾಡಾನೆ, ಆತಂಕ ಸೃಷ್ಟಿಸಿತ್ತು. ಇದೇ ವೇಳೆ ಜಾನುವಾರುಗಳು ಕೂಡ ಆನೆ ಕಂಡು ಬೆಚ್ಚಿ ಓಡಿದವು.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಚಿರತೆ: 12 ಜನರ ಮೇಲೆ ಮಾರಣಾಂತಿಕ ದಾಳಿ
ಈ ರಾಷ್ಟ್ರೀಯ ಹೆದ್ದಾರಿಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಿಂದ ಮಂಗಳೂರಿಗೆ ಸಂಪರ್ಕಿಸುವ ರಸ್ತೆಯಾಗಿದೆ. ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಇದನ್ನೂ ಓದಿ: ಮಂಗಳೂರು: ಆಹಾರ ಅರಸಿ ಬಂದು ಬಾವಿಗೆ ಬಿದ್ದ ಅಪರೂಪದ ಕರಿಚಿರತೆ ಸೆರೆ