ಬಂಡೀಪುರದಲ್ಲಿ ಪ್ರವಾಸಿಗರೆದುರೇ ಮರಿಗೆ ಜನ್ಮ ನೀಡಿದ ಕಾಡಾನೆ - ವಿಡಿಯೋ - Elephant Baby - ELEPHANT BABY
🎬 Watch Now: Feature Video
Published : Jun 2, 2024, 12:37 PM IST
ಚಾಮರಾಜನಗರ: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಅಪರೂಪದ ಕ್ಷಣವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ಹೌದು, ಬಂಡೀಪುರ ಸಫಾರಿ ಝೋನ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರಿಗೆ ತಾಯಿ ಹುಲಿ ಜೊತೆ ಮೂರು ಹುಲಿ ಮರಿಗಳು ಕಾಣಿಸಿಕೊಂಡಿದ್ದವು. ಇದಿಗ ಸಫಾರಿ ಝೋನ್‌ನಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಪ್ರವಾಸಿಗರು ಅಪರೂಪದ ಈ ಕ್ಷಣಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ : ಗಜರಾಜನಿಗೂ ಇಷ್ಟ ಮಾವು: ಮರ ಹತ್ತಿ ಹಣ್ಣು ಕಿತ್ತು ತಿಂದ ಆನೆ- ವಿಡಿಯೋ - Elephant Ate Mango
ಬಂಡೀಪುರದ ಸಫಾರಿ ಝೋನ್ನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರ ಸಫಾರಿ ವಾಹನ ನಿಂತು ನೋಡುತ್ತಿದ್ದ ವೇಳೆ ಕಾಡಾನೆಯೊಂದು ಒಂದು ಸುತ್ತು ಹಾಕಿ ಮರಿಗೆ ಜನ್ಮ ಕೊಟ್ಟಿದೆ. ಈ ಘಟನೆ ಶುಕ್ರವಾರದ ಸಫಾರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಆನೆಯೊಂದು ಮರ ಹತ್ತಿ, ಮಾವು ಕಿತ್ತು ತಿಂದಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಆನೆಯ ಪ್ರಸವದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ : ಸತತ 6 ಗಂಟೆಗಳ ಕಾರ್ಯಾಚರಣೆ; ಬಾವಿಗೆ ಬಿದ್ದ ಮರಿ ಆನೆ ರಕ್ಷಿಸಿದ ಅರಣ್ಯ ಇಲಾಖೆ - ELEPHANT CUB RESCUED