ಬಡ ವಿದ್ಯಾರ್ಥಿಗಳ ಶಿಕ್ಷಣ: ನಿಧಿ ಸಂಗ್ರಹಕ್ಕಾಗಿ 'ಟೀಚ್ ಫಾರ್ ಚೇಂಜ್ ಫ್ಯಾಶನ್ ಶೋ' - ಖ್ಯಾತ ಚಿತ್ರನಟಿ ಮಂಚು ಲಕ್ಷ್ಮಿ
🎬 Watch Now: Feature Video
Published : Feb 12, 2024, 1:05 PM IST
ಹೈದರಾಬಾದ್: ಹೈದರಾಬಾದ್ನ ಮಾದಾಪುರದಲ್ಲಿ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸಲು ಜನಪ್ರಿಯ ನಟಿ ಲಕ್ಷ್ಮಿ ಮಂಚು ಅವರು ಆಯೋಜಿಸಿದ ವಾರ್ಷಿಕ ಟೀಚ್ ಫಾರ್ ಚೇಂಜ್ ಫ್ಯಾಶನ್ ಶೋ ನಗರದ ಜನರ ಗಮನಸೆಳೆಯಿತು.
ಖ್ಯಾತ ಚಿತ್ರನಟಿ ಮಂಚು ಲಕ್ಷ್ಮಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಓದುತ್ತಿದ್ದರೂ ಪ್ರತಿಯೊಬ್ಬ ಬಡ ವಿದ್ಯಾರ್ಥಿಗೂ ನ್ಯಾಯಯುತ ಶಿಕ್ಷಣ ನೀಡಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿದೆ. ಉತ್ತಮ ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ''ಬಡ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ನೀಡುವ ಪಯಣವು ಒಂದೇ ಶಾಲೆಯಿಂದ ಆರಂಭವಾಗಿತ್ತು. ಸದ್ಯ 500 ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ'' ಎಂದು ಮಂಚು ಲಕ್ಷ್ಮಿ ತಿಳಿಸಿದರು.
ಖ್ಯಾತ ಚಲನಚಿತ್ರ ತಾರೆಯರಾದ ಶ್ರುತಿ ಹಾಸನ್, ಶ್ರೇಯಾ, ನಟ ಹರ್ಷವರ್ಧನ್, ಖ್ಯಾತ ಕ್ರೀಡಾಪಟು ಸೈನಾ ನೆಹ್ವಾಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ರ‍್ಯಾಂಪ್ ವಾಕ್ ಮಾಡಿದರು. ಮಹಿಳಾ ಉಡುಪುಗಳ ಹೆಸರಾಂತ ಫ್ಯಾಷನ್ ಮಾಂತ್ರಿಕ ಅಮಿತ್ ಜೆಟಿ ಮತ್ತು ಪುರುಷರ ಉಡುಪುಗಳಿಗೆ ಫ್ಯಾಷನ್ ಡಿಸೈನರ್ ಶಶಾಂಕ್ ಚೆಲ್ಮಿಲ್ಲ ಅವರ ವಿನ್ಯಾಸಗಳು ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಹಿಡಿತ ಸಾಧಿಸುತ್ತಿರುವ ಶಾಹಿದ್ - ಕೃತಿ ಸಿನಿಮಾ: ಚೆನ್ನೈ ಬಳಿಕ ಬೆಂಗಳೂರಿನಲ್ಲೇ ಹೆಚ್ಚು ವೀಕ್ಷಣೆ