Watch Video:ಶಾಸಕ ಸುರೇಶ್ ಬಾಬುರನ್ನು ತಬ್ಬಿ, ಮುತ್ತಿಟ್ಟು ಕಣ್ಣೀರು ಹಾಕಿದ ವಿ. ಸೋಮಣ್ಣ - V Somanna got emotional - V SOMANNA GOT EMOTIONAL
🎬 Watch Now: Feature Video
Published : Apr 22, 2024, 8:09 AM IST
|Updated : Apr 23, 2024, 12:39 PM IST
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಅವರು ಭರ್ಜರಿ ಪ್ರಚಾರ ನಡೆಸಿದರು.
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಸೋಮಣ್ಣ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೂ ಸೋಮಣ್ಣ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಲ್ಲಿ ಪ್ರಚಾರ ನಡೆಸಿದ್ದಲ್ಲದೇ, ಚಿಕ್ಕನಾಯಕನಹಳ್ಳಿ ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪೂಜೆ ಬಳಿಕ ವಿವಿಧ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಇವರಿಗೆ ಈ ಕ್ಷೇತ್ರದ ಶಾಸಕ ಸುರೇಶ್ ಬಾಬು ಅವರು ಸಾಥ್ ನೀಡಿದ್ಧಾರೆ. ಪ್ರಚಾರ ಮುಗಿದ ಬಳಿಕ ಮುಂದಿನ ತಾಲೂಕಿಗೆ ತೆರಳುವ ಮುನ್ನ ಮಾಧುಸ್ವಾಮಿ ಅನುಪಸ್ಥಿತಿಯಲ್ಲಿ ತಮಗೆ ಸಾಥ್ ನೀಡಿದ ಸುರೇಶ್ ಬಾಬು ಅವರನ್ನು ತಬ್ಬಿಕೊಂಡು, ಮುತ್ತಿಟ್ಟು ಕಣ್ಣೀರು ಹಾಕಿದರು.
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ತುಮಕೂರಿನಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಜಿಲ್ಲೆಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿ. ಸೋಮಣ್ಣ ಟಿಕೆಟ್ ಪಡೆದಿದ್ದರೆ, ಇವರಿಗೆ ಸ್ಫರ್ಧಿಯಾಗಿ ಕಾಂಗ್ರೆಸ್ನಿಂದ ಎಸ್.ಪಿ.ಮುದ್ದಹನುಮೇಗೌಡ ಅಖಾಡಕ್ಕೆ ಇಳಿದಿದ್ದಾರೆ. ಜೂನ್ 04 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ದೇಶದ ರಾಜಕೀಯ ನಿರ್ಧಾರವಾಗಲಿದೆ.
ಇದನ್ನೂ ಓದಿ: ಮಾಧುಸ್ವಾಮಿ ಅನುಪಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಭರ್ಜರಿ ಪ್ರಚಾರ - Lok Sabha Election 2024