ಕಟೀಲು ಗಜರಾಣಿಯ ನೋಡಲು ಬಂದ ಸ್ವಿಟ್ಜರ್ಲ್ಯಾಂಡ್ನ ಇಬ್ಬರು ಪ್ರವಾಸಿಗರು - ಸ್ವಿಟ್ಜರ್ಲ್ಯಾಂಡ್ನ ಪ್ರವಾಸಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/11-02-2024/640-480-20725640-thumbnail-16x9-sanjuu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Feb 11, 2024, 8:46 PM IST
ಮಂಗಳೂರು : ಕ್ರಿಕೆಟ್, ಫುಟ್ಬಾಲ್, ನೀರಾಟವಾಡುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನೆ 'ಮಹಾಲಕ್ಷ್ಮಿ'ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನಿಸಿದ್ದ ದೂರದ ಸ್ವಿಟ್ಜರ್ಲ್ಯಾಂಡ್ನ ಪ್ರವಾಸಿಗರಿಬ್ಬರು ಆನೆಯನ್ನು ಕಣ್ಣಾರೆ ಕಾಣಲೆಂದು ಕಟೀಲಿಗೆ ಬಂದಿದ್ದಾರೆ.
ಸೈಕಲ್ನಲ್ಲೇ ಪ್ರಪಂಚ ಸುತ್ತುತ್ತಿರುವ ಕ್ಲಾಡಿಯೋ ಬ್ರಾಂಡ್ಲಿ ಮತ್ತು ಉರ್ಸ್ ಎಂಬಿಬ್ಬರು ಪ್ರವಾಸಿಗರು ಸ್ವಿಟ್ಜರ್ಲ್ಯಾಂಡ್ ದೇಶದ ಪ್ರಜೆಗಳು. ಕಟೀಲಿನ ಆನೆಯನ್ನು ನೋಡಲೆಂದು ಇಲ್ಲಿಗೆ ಬಂದಿದ್ದಾರೆ. 22ರ ಕ್ಲಾಡಿಯೋ ಎಂಬ ಯುವಕ ತನ್ನ ಅಂಕಲ್ ಉರ್ಸ್ ರೊಂದಿಗೆ 2022ರ ಸೆಪ್ಟೆಂಬರ್ ಏಳರಿಂದ ಪ್ರಪಂಚ ಪರ್ಯಟನೆಯಲ್ಲಿದ್ದಾರೆ. ಸ್ವಿಟ್ಜರ್ಲ್ಯಾಂಡ್ನಿಂದ ಸೈಕಲ್ ಪ್ರಯಾಣ ಬೆಳೆಸಿರುವ ಇವರು ಮಂಗೋಲಿಯಾ, ಮಧ್ಯ ಏಷ್ಯಾ, ಇರಾನ್, ಒಮಾನ್ ರಾಷ್ಟ್ರಗಳು ಸೇರಿದಂತೆ 22ದೇಶಗಳನ್ನು ಸುತ್ತಿ ಸದ್ಯ ಮಂಗಳೂರಿನ ಕಟೀಲಿಗೆ ಆಗಮಿಸಿದ್ದಾರೆ. ಒಮಾನ್ನಿಂದ ಕೊಚ್ಚಿಗೆ ಆಗಮಿಸಿರುವ ಇವರು ಕಳೆದ ಕೆಲ ದಿನಗಳಿಂದ ಭಾರತದ ಪ್ರವಾಸದಲ್ಲಿದ್ದಾರೆ.
ಭಾರತದ ಪ್ರವಾಸದಲ್ಲಿರುವ ವೇಳೆ ಕಟೀಲು ದೇವಸ್ಥಾನದ ಆನೆ ಮಹಾಲಕ್ಷ್ಮಿಯನ್ನು ಕಾಣಲೆಂದು ಯೋಜನೆ ಮಾಡಿದ್ದಾರೆ. ಅದರಂತೆ ಕಟೀಲಿಗೆ ಆಗಮಿಸಿ ಆನೆಯನ್ನು ಕಂಡು ಸಂತೋಷಪಟ್ಟಿದ್ದಾರೆ. ಈ ಆನೆಯ ವಿಶೇಷತೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಪಣಂಬೂರು ಬೀಚ್ನಲ್ಲಿ ಫ್ಲೋಟಿಂಗ್ ಬ್ರಿಡ್ಜ್ ಆರಂಭ: ಪ್ರವಾಸಿಗರು ಫುಲ್ ಖುಷ್