ದಾವಣಗೆರೆಯಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರ, ವಿದ್ಯುತ್ ಕಂಬಗಳು - TREES FELL ON CAR - TREES FELL ON CAR
🎬 Watch Now: Feature Video
Published : Jul 15, 2024, 4:41 PM IST
ದಾವಣಗೆರೆ: ನಗರದಲ್ಲಿ ರಾತ್ರಿ ಇಡೀ ಸತತವಾಗಿ ಸುರಿದ ಜಡಿ ಮಳೆಯಿಂದ ಬೃಹತ್ ಮರದ ಕೊಂಬೆಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬ ಧರೆಗುರುಳಿದೆ. ಕಾರ್ ಮೇಲೆ ಮರದ ಕೊಂಬೆಗಳು ಬಿದ್ದಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ.
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬಿರುಸಿನ ಮಳೆ ಆಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ನಗರದ ತರಳುಬಾಳು ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ರಾತ್ರಿ ಇಡೀ ನಿರಂತರ ಮಳೆಯಾಗಿದ್ದು, ಮರದ ಕೊಂಬೆಗಳು ತೊಯ್ದು ತೊಪ್ಪೆ ಆಗಿದ್ದರಿಂದ ಮುರಿದು 3 ವಿದ್ಯುತ್ ಕಂಬಗಳ ಮೇಲೆ ಮೇಲೆ ಬಿದ್ದಿದ್ದರಿಂದ ಕಂಬಗಳು ಜಖಂ ಆಗಿವೆ.
ರಾತ್ರಿಯಿಂದ ಸುರಿದ ಮಳೆಗೆ ಮರಗಳು ಧರೆಗುರುಳಿವೆ. ಇದಲ್ಲದೆ ಮಳೆಗೆ ಕಾರ್ ಮೇಲೆ ಮರದ ಕೊಂಬೆಗಳು ಮುರಿದು ಬಿದ್ದಿದ್ದರಿಂದ ಇಡೀ ಕಾರು ನಜ್ಜುಗುಜ್ಜಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಹಲವು ಬಾರಿ ಅಧಿಕಾರಿಗಳಿಗೆ ಹಳೆ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದೆವು. ಆದರೆ ಬೇರೆ ಬೇರೆ ಸಬೂಬು ಹೇಳ್ತಾ ವಿಳಂಬ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಹಳೆಯ ಮರಗಳನ್ನು ತೆರವುಗೊಳಿಸದಿದ್ದರೆ ಪ್ರತಿಭಟಿಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಮಲೆನಾಡಿನಲ್ಲಿ ಧಾರಾಕಾರ ಮಳೆ : ಸೇತುವೆ ಮೇಲೆ ಹರಿದ ನೀರು, ರಸ್ತೆ ಸಂಪರ್ಕ ಬಂದ್ - heavy rainfall in chikkamagaluru