ನಿಂತಿದ್ದ ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ: ಕೂದಲೆಳೆ ಅಂತರದಿಂದ ಸವಾರ ಪಾರು; ದೃಶ್ಯ ಸೆರೆ - tractor collided with the bike - TRACTOR COLLIDED WITH THE BIKE
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/27-06-2024/640-480-21806341-thumbnail-16x9-vny.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jun 27, 2024, 2:24 PM IST
ದಾವಣಗೆರೆ: ರಸ್ತೆ ಬದಿ ನಿಂತಿದ್ದ ಬೈಕ್ ಸವಾರನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಕೂದಲೆಳೆ ಅಂತರದಿಂದ ಬಚಾವ್ ಆಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಚನ್ನಗಿರಿ ಪಟ್ಟಣದ ಮುಖ್ಯರಸ್ತೆಯಲ್ಲಿ ಇಳಿಜಾರು ಪ್ರದೇಶದಲ್ಲಿ ಡ್ರೈವರೊಬ್ಬ ಟ್ರ್ಯಾಕ್ಟರ್ ನಿಲ್ಲಿಸಿ ಹೋಗಿದ್ದ. ಈ ವೇಳೆ, ಅದೇ ರಸ್ತೆಯಲ್ಲಿ ಬೈಕ್ ಸವಾರ ರಸ್ತೆ ಬದಿ ತಮ್ಮ ವಾಹನ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಳಿಜಾರು ಪ್ರದೇಶದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಚಲಿಸಲಾರಂಭಿಸಿದೆ. ಇಳಿಜಾರು ಇದ್ದ ಕಾರಣ ವೇಗವಾಗಿ ಬಂದ ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಇನ್ನು ಟ್ರ್ಯಾಕ್ಟರ್ ಬರುವುದನ್ನು ಗಮನಿಸಿದ ಬೈಕ್ ಸವಾರ ವಾಹನ ಬಿಟ್ಟು ರಸ್ತೆ ಬದಿಗೆ ಹಾರಿದ್ದಾರೆ. ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದು ಎಳೆದೊಯ್ದಿದೆ.
ಬೈಕ್ ಮೇಲೆ ಕೂತಿದ್ದಾ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದ್ವೀಚಕ್ರ ವಾಹನದ ಮೇಲೆ ಟ್ರ್ಯಾಕ್ಟರ್ ನುಗ್ಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಟ್ರ್ಯಾಕ್ಟರ್ ನುಗ್ಗಿದ ಪರಿಣಾಮ ಇಡೀ ಬೈಕ್ ಜಖಂ ಆಗಿದ್ದು, ಟ್ರ್ಯಾಕ್ಟರ್ ಡ್ರೈವರ್ ವಿರುದ್ಧ ಬೈಕ್ ಸವಾರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.