ಮುಂಬೈನಲ್ಲಿ ಟಿ20 ವಿಶ್ವ ಚಾಂಪಿಯನ್‌ ಭಾರತ ತಂಡದ ವಿಜಯೋತ್ಸವ: LIVE - Team India Victory Parade

By ETV Bharat Karnataka Team

Published : Jul 4, 2024, 5:17 PM IST

Updated : Jul 4, 2024, 9:58 PM IST

thumbnail

ಮುಂಬೈ: ಚುಟುಕು ವಿಶ್ವಕಪ್ ಗೆದ್ದಿರುವ ಭಾರತೀಯ ಕ್ರಿಕೆಟ್​ ತಂಡ ಇಂದು ಬೆಳಿಗ್ಗೆ ಬಾರ್ಬಡೊಸ್‌ನಿಂದ ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಮರಳಿದೆ. ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಂಡವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ನಂತರ ಪ್ರಧಾನಿ ಮೋದಿ ಅವರ ನಿವಾಸಕ್ಕೆ ತಂಡದ ಸದಸ್ಯರು ಭೇಟಿ ನೀಡಿದರು. ಪ್ರಧಾನಿ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದರು. ವಿಶ್ವಕಪ್​ ಗೆದ್ದು ಬಂದ ತಂಡಕ್ಕೆ ಪ್ರಧಾನಿ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ಇದೀಗ ಚಾಂಪಿಯನ್ ತಂಡ ಮುಂಬೈಗೆ ಆಗಮಿಸಿದ್ದು, ಎಲ್ಲೆಡೆ ಸಂಭ್ರಮಾಚರಣೆ ಮನೆ ಮಾಡಿದೆ. ವಿಶ್ವ ಚಾಂಪಿಯನ್ನರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕ್ರಿಕೆಟ್ ತಂಡವನ್ನು ತೆರೆದ ಬಸ್​​ನಲ್ಲಿ ಅತ್ಯಂತ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುತ್ತಿದೆ. ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಿಂದ ಮೆರವಣಿಗೆಯ ಮೂಲಕ ಸಾಗಿ ವಾಂಖೆಡೆ ಸ್ಟೇಡಿಯಂಗೆ ಆಟಗಾರರನ್ನು ಕರೆತರಲಾಗುತ್ತದೆ. ಈ ಭವ್ಯ ರೋಡ್​ ಶೋನಲ್ಲಿ ಎಲ್ಲಾ ಆಟಗಾರರು ವಿಶ್ವಕಪ್​ನೊಂದಿಗೆ ಅಭಿಮಾನಿಗಳತ್ತ ಕೈಬೀಸುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ನಾಯಕ ರೋಹಿತ್ ಶರ್ಮಾ ಅವರು ವಿಶ್ವಕಪ್ ಅನ್ನು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರಿಗೆ ಹಸ್ತಾಂತರಿಸಲಿದ್ದಾರೆ.

Last Updated : Jul 4, 2024, 9:58 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.