'ಗೌರಿ' ಚಿತ್ರೀಕರಣ ಚುರುಕು: ರೊಮ್ಯಾಂಟಿಕ್ ವಿಡಿಯೋ ಇಲ್ಲಿದೆ - ಸಾನ್ಯಾ ಅಯ್ಯರ್
🎬 Watch Now: Feature Video
Published : Feb 13, 2024, 2:21 PM IST
ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಗುರುತಿಸಿಕೊಂಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ಗೌರಿ'. ಚಿತ್ರೀಕರಣ ಭರದಿಂದ ಸಾಗಿದೆ. ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ಅವರು ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿಸುತ್ತಿದ್ದಾರೆ. ಸಾನ್ಯಾ ಅಯ್ಯರ್ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ.
ಬಹುದೊಡ್ಡ ತಾರಾಗಣವಿರುವ 'ಗೌರಿ' ಚಿತ್ರದ ಆಕರ್ಷಕ ಫೋಟೋಶೂಟ್ 'ಬುಕ್ ಮೈ ಕ್ಯಾಪ್ಚರ್'ನಲ್ಲಿ ಯಶಸ್ವಿಯಾಗಿ ನಡೆದಿದೆ. ಖ್ಯಾತ ಛಾಯಾಗ್ರಾಹಕ, ಕೆನಡಾದ ರೋಹಿತ್ ಅವರ ಕ್ಯಾಮರಾ ಕೈಚಳಕ, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಖ್ಯಾತ ಸೆಲಬ್ರಿಟಿಗಳ ಮೇಕಪ್ ಆರ್ಟಿಸ್ಟ್ ಆಗಿರುವ ಗೌರಿ ಕಪೂರ್ ಅವರ ಮೇಕಪ್ ಫೋಟೋಶೂಟ್ನಲ್ಲಿ ಮೋಡಿ ಮಾಡಿದೆ. ನಾಳೆ ವ್ಯಾಲೆಂಟೈನ್ಸ್ ಡೇ. ಈ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ 'ಗೌರಿ' ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಫೋಟೋಶೂಟ್ ನಿಮಗಾಗಿ.
ಇದನ್ನೂ ಓದಿ: 'ಗೌರಿ'ಯ ಪ್ರೇಮಭರಿತ ಫೋಟೋಶೂಟ್: ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾವಿದು