ಮಧ್ಯಂತರ ಬಜೆಟ್ ಮೇಲೆ ಹೆಚ್ಚು ನಿರೀಕ್ಷೆ ಇರಲಿಲ್ಲ: ಗೋಪಿನಾಥ್
🎬 Watch Now: Feature Video
Published : Feb 1, 2024, 8:18 PM IST
ಶಿವಮೊಗ್ಗ: ಇದೊಂದು ಮಧ್ಯಂತರ ಬಜೆಟ್ ಆಗಿದ್ದ ಕಾರಣ, ಈ ಬಜೆಟ್ ಬಗ್ಗೆ ಹೆಚ್ಚು ನಿರೀಕ್ಷೆ ಇರಲಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದ್ದಾರೆ.
ಬಜೆಟ್ ಮೇಲಿನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕೇಂದ್ರ ಸರ್ಕಾರದವರು ಚುನಾವಣೆ ಮುಂದೆ ಇಟ್ಟುಕೊಂಡಿದ್ದರೂ ಕೇವಲ ಘೋಷಣೆಗೆ ಸೀಮಿತವಾದ ಯೋಜನೆಗಳನ್ನು ಮಾಡದಿರುವುದರಿಂದ ಅವರಿಗೆ ಅಭಿನಂದನೆಗಳು. ಈ ಬಜೆಟ್ ಅನ್ನು ನಾವು ವಿಮರ್ಶೆ ಮಾಡಬೇಕಾದರೆ ಕಳೆದ 10 ವರ್ಷದ ಬಜೆಟ್ ಅನ್ನು ನೋಡಬೇಕಿದೆ ಎಂದು ಹೇಳಿದರು.
2014ರಲ್ಲಿ ಅರುಣ್ ಜೇಟ್ಲಿ ಅವರು ಬಜೆಟ್ ಮಂಡನೆ ಮಾಡಿದಾಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಹಿಂದೆ ಸ್ಮಾರ್ಟ್ ಸಿಟಿ ಹಾಗೂ ಜಿಎಸ್ಟಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಜೊತಗೆ ರಸ್ತೆ, ರೈಲು, ವಿಮಾನ ನಿಲ್ದಾಣಗಳು ದೇಶದಲ್ಲಿ ಹೆಚ್ಚಾಗಿವೆ. ನಮ್ಮ ದೇಶ ಈಗ ಪ್ರಪಂಚದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಕೇಂದ್ರ ಸರ್ಕಾರ ಸಾಕಷ್ಟು ಶ್ರಮವಹಿಸಿದೆ. ದೇಶದ ಮೂಲ ಸೌಕರ್ಯ ಹೆಚ್ಚಿಸಿ, ಆರ್ಥಿಕ ಶಕ್ತಿ ತುಂಬಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರವಾಸೋದ್ಯಮಕ್ಕೆ 75 ಸಾವಿರ ಕೋಟಿ ರೂಪಾಯಿ ನಿಗದಿ ಮಾಡಿದ್ದಾರೆ. ರಾಜಕಾರಣಿಗಳಾಗಿ ಮಾತನಾಡದೇ ಪ್ರವಾಸೋದ್ಯಮಕ್ಕೆ ಹಣ ಮೀಸಲಿಟ್ಟಿರುವುದು ಸ್ವಾಗತಾರ್ಹ. ಪೂರ್ಣ ಪ್ರಮಾಣದ ಬಜೆಟ್ ಆಗಿದ್ದರೆ, ಶಿವಮೊಗ್ಗ- ಹರಿಹರ ರೈಲ್ವೆ ಹಾಗೂ ಶಿವಮೊಗ್ಗ- ಬಿರೂರು ಡಬ್ಬ್ಲಿಂಗ್ ಗೆ ಅನುಕೂಲವಾಗುತ್ತಿತ್ತು. ತಾಳಗುಪ್ಪ- ಶಿರಸಿ ರೈಲು ಮಾರ್ಗಕ್ಕೆ ಅನುಕೂಲಕರವಾಗುತ್ತಿತ್ತು . ಕೈಗಾರಿಕೆಯಲ್ಲಿ ಎಂಎಸ್ಎಂಇಗೆ ಇನ್ನಷ್ಟು ಅನುದಾನ ಬೇಕಾಗಿತ್ತು. ಇನ್ನೂ ಮುಂದಿನ ದಿನಗಳಲ್ಲಿ ಉತ್ತಮ ಬಜೆಟ್ ಮಂಡನೆ ಆಗಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದನ್ನೂಓದಿ:ಇಷ್ಟೊಂದು ಕಳಪೆ ಕೇಂದ್ರ ಬಜೆಟ್ನ್ನು ಯಾವತ್ತೂ ನೋಡಿಲ್ಲ, ರಾಜ್ಯಕ್ಕೂ ಅನ್ಯಾಯವಾಗಿದೆ: ಡಿ ಕೆ ಶಿವಕುಮಾರ್