'ಅಕ್ಷರ ಯೋಧ'ನಿಗೆ ಗೌರವ ನಮನ; ಆಂಧ್ರ ಸರ್ಕಾರದಿಂದ ರಾಮೋಜಿ ರಾವ್ ಪುಣ್ಯಸ್ಮರಣೆ - LIVE - Ramoji Rao memorial service

🎬 Watch Now: Feature Video

thumbnail

By ETV Bharat Karnataka Team

Published : Jun 27, 2024, 4:02 PM IST

Updated : Jun 27, 2024, 7:00 PM IST

ಅಮರಾವತಿ: ರಾಮೋಜಿ ರಾವ್ ಗ್ರೂಪ್ ಚೇರ್ಮನ್, ಈನಾಡು ಸಂಸ್ಥೆಯ ಸಂಸ್ಥಾಪಕ ಪದ್ಮವಿಭೂಷಣ ದಿ. ರಾಮೋಜಿ ರಾವ್​ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಂಧ್ರಪ್ರದೇಶ ಸರ್ಕಾರವು ಆಯೋಜಿಸಿದೆ. ವಿಜಯವಾಡದ ಅನುಮೋಲು ಗಾರ್ಡ್​ನ್ಸ್​ನಲ್ಲಿ ನಡಯುತ್ತಿರುವ ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ. ಪತ್ರಿಕಾ ರಂಗ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಆಂಧ್ರ ಪ್ರದೇಶ ಸರ್ಕಾರವು ಈ ಪುಣ್ಯ ಸ್ಮರಣೆ ಕಾರ್ಯಕ್ರಮದ ಮೂಲಕ ರಾಮೋಜಿ ರಾವ್ ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ.  ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಹಿರಿಯ ಪತ್ರಕರ್ತರಾದ ಎನ್ ರಾಮ್, ಶೇಖರ್ ಗುಪ್ತಾ, ಗುಲಾಬ್ ಕೊಠಾರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಗ್ಗುಬಾಟಿ ಪುರಂದೇಶ್ವರಿ ಮತ್ತು ಸಿನಿಮಾ ನಿರ್ದೇಶಕ ರಾಘವೇಂದ್ರ ರಾವ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಚಿಕ್ಕ ಗ್ರಾಮದಲ್ಲಿ ಜನಿಸಿದ್ದ ರಾಮೋಜಿ ರಾವ್ ಅವರು ಹಂತ ಹಂತವಾಗಿ ಬೆಳೆದು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಸಮಾಜಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ. ಈನಾಡು ಮತ್ತು ಈಟಿವಿ ಸಂಸ್ಥೆಯ ಮೂಲಕ ಮಾಧ್ಯಮಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಜೊತೆಗೆ ವಿಶ್ವವಿಖ್ಯಾತ ರಾಮೋಜಿ ರಾವ್ ಫಿಲ್ಮ್ ಸಿಟಿ ಕಟ್ಟಿದರು. ರಾಮೋಜಿ ಅವರು ಜೂನ್ 8 ರಂದು ಇಹಲೋಕ ತ್ಯಜಿಸಿದ್ದಾರೆ.   
Last Updated : Jun 27, 2024, 7:00 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.