ಸುಡು ಬಿಸಿಲಿಗೆ ಬಸವಳಿದಿದ್ದ ಕುಂದಾನಗರಿ ಜನರಿಗೆ ತಂಪೆರೆದ ಮಳೆ - Belagavi Rain

🎬 Watch Now: Feature Video

thumbnail

ಬೆಳಗಾವಿ: ಶುಕ್ರವಾರದಂದು ಮೊದಲ ಮಳೆ ಕುಂದಾನಗರಿ ಬೆಳಗಾವಿಗೆ ತಂಪೆರೆಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ವರುಣ ಅಬ್ಬರಿಸಿದನು. ವರುಣರಾಯನ ಆಗಮನ ಕಂಡು ಜನರು ಪುಳಕಿತರಾದರು. ಬೆಳಗಾವಿ ನಗರದ ಚೆನ್ನಮ್ಮ ವೃತ್ತ, ಟಿಳಕವಾಡಿ, ‌ಸದಾಶಿವ ನಗರ ಸೇರಿ ಹಲವು ಬಡಾವಣೆಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯ ಆರ್ಭಟವಿತ್ತು. ಸುರಿಯುವ ಮಳೆಯನ್ನು ಬಹುತೇಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು. ಅಲ್ಲದೇ ಮಳೆರಾಯನಿಗೆ ಸ್ವಾಗತ ಕೂಡ ಕೋರಿದರು.

ನಿನ್ನೆ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಕಳೆದ ಒಂದು ತಿಂಗಳಿನಿಂದ ಬಿಸಿಲಿನ ಕಾವಿಗೆ ಸಾಕು ಸಾಕಾಗಿ ಹೋಗಿದ್ದ ಕುಂದಾನಗರಿ ಜನ ಈ ಮಳೆಯಿಂದ ಸ್ವಲ್ಪ ನಿರಾಳರಾದರು. ಏಕಾಏಕಿ‌ ಮಳೆ ಆರಂಭವಾಗಿದ್ದರಿಂದ ಕೆಲಕಾಲ ಸಾರ್ವಜನಿಕರು‌‌ ಪರದಾಟ ನಡೆಸುವಂತಾಯ್ತು. ಇನ್ನು ಜೋಳದ ರಾಶಿ ಮಾಡುವ ರೈತರಿಗೆ ಮಳೆ ಸ್ವಲ್ಪ ಅಡ್ಡಿಯುಂಟುಮಾಡಿತು.

ಇದನ್ನೂ ಓದಿ: ಮಂಗಳೂರು: ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ಕಾಳಿಂಗ ಸರ್ಪ - King Cobra Escapes

ಇದನ್ನೂ ಓದಿ: ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ; ಈ ಬಾರಿಯ ಮುಂಗಾರು ಬಗ್ಗೆ ಸಿಹಿ ಸುದ್ದಿ ನೀಡಿದ ಹವಾಮಾನ ಇಲಾಖೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.