ಮೀನು ಹಿಡಿಯಲು ಹೋದ ಯುವಕನ ಮೇಲೆ ಬೃಹತ್ ಶಾರ್ಕ್ ದಾಳಿ: ವಿಡಿಯೋ - ಶಾರ್ಕ್ ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/13-02-2024/640-480-20744121-thumbnail-16x9-ran.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Feb 13, 2024, 11:05 PM IST
ಪಾಲ್ಘಾರ್ (ಮಹಾರಾಷ್ಟ್ರ): ಸರೋವರದಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕನ ಮೇಲೆ ಬೃಹತ್ ಶಾರ್ಕ್ ದಾಳಿ ಮಾಡಿ ಅರ್ಧಕಾಲನ್ನೇ ತಿಂದು ಹಾಕಿರುವ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ. 32 ವರ್ಷದ ವಿಕ್ಕಿ ಗೌವರಿ ಎಂಬ ಯುವಕನೇ ಮೀನಿನ ದಾಳಿಗೆ ತುತ್ತಾಗಿದ್ದು, ಸದ್ಯ ಈತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಲ್ಲಿನ ಮನೋರ್ ಎಂಬ ಪ್ರದೇಶದ ಸೈಲೆಂಟ್ ಹೋಟೆಲ್ ಬಳಿಯ ಸರೋವರದಲ್ಲಿ ವಿಕ್ಕಿ ಮೀನುಗಾರಿಕೆಗೆ ತೆರಳಿದ್ದ. ಈ ವೇಳೆ, ಬೃಹತ್ ಗಾತ್ರದ ಮೀನು ದಾಳಿ ಮಾಡಿ, ಕಾಲನ್ನು ಕಡಿದು ಹಾಕಿದೆ. ಇದರಿಂದ ತಪ್ಪಿಸಿಕೊಳ್ಳಲು ಯುವಕ ಸಾಕಷ್ಟು ಪ್ರಯತ್ನಪಟ್ಟಿದ್ದಾನೆ. ಆದರೆ, ಮೀನು ಮೊಣಕಾಲಿನ ಕೆಳ ಭಾಗವನ್ನು ತಿಂದು ಹಾಕಿದೆ. ಈ ವೇಳೆ, ವಿಷಯ ತಿಳಿದು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜೊತೆಗೆ ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿ, ಮೀನಿನ ಬಾಯಿಯಿಂದ ಆತನನ್ನು ರಕ್ಷಣೆ ಮಾಡಿದ್ದಾರೆ. ಮತ್ತೊಂದೆಡೆ, ಈ ಮೀನಿನ ಗಾತ್ರ ಸುಮಾರು 200 ಕೆಜಿ ಇದೆ ಎಂದು ಅಂದಾಜಿಸಲಾಗಿದೆ. ಇದನ್ನು ಸ್ಥಳೀಯರು ಸೆರೆಹಿಡಿದು ಕೊಂದು ಹಾಕಿದ್ದಾರೆ. ಶಾರ್ಕ್ ದಾಳಿ ಮಾಡಿದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಗಂಡನೊಂದಿಗೆ ಜಗಳ, ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ: ಬದುಕುಳಿದ ತಾಯಿ