ಸತತ ಮೂರನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ; ಪದಗ್ರಹಣ ಸಮಾರಂಭದ ನೇರ ಪ್ರಸಾರ - Modi Swearing In Ceremony - MODI SWEARING IN CEREMONY
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/09-06-2024/640-480-21673084-thumbnail-16x9-newsdd.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jun 9, 2024, 7:14 PM IST
|Updated : Jun 9, 2024, 9:58 PM IST
ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುತ್ತಿದೆ. ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ರಾಷ್ಷ್ರಪತಿ ಭವನದಲ್ಲಿ ಆಯೋಜಿಸಿರುವ ಪ್ರಮಾಣವಚನ ಸಮಾರಂಭದ ನೇರ ಪ್ರಸಾರ ಇಲ್ಲಿದೆ.ಮೋದಿ ಅವರ ಜೊತೆಗೆ ಕೆಲ ಸಂಸದರೂ ಕೂಡ ಕೇಂದ್ರ ಸಂಪುಟ ಸದಸ್ಯರಾಗಿ ಪದಗ್ರಹಣ ಮಾಡುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸುತ್ತಿದ್ದಾರೆ.ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ. ಎನ್ಡಿಎ ಮೈತ್ರಿಪಕ್ಷಗಳ ವರಿಷ್ಠರು, ನೆರೆ ದೇಶಗಳು ಮತ್ತು ಹಿಂದೂ ಮಹಾಸಾಗರ ವ್ಯಾಪ್ತಿಯ ಗಣ್ಯರು ಹಾಗೂ ವಿಶೇಷ ಆಹ್ವಾನಿತರು ಪಾಲ್ಗೊಂಡಿದ್ದಾರೆ. ಹಾಗೆಯೇ ಭಾರತೀಯ ರೈಲ್ವೆಯ ಒಟ್ಟು 10 ಜನ ಲೋಕೊ ಪೈಲಟ್‌ಗಳು, ತೃತೀಯ ಲಿಂಗಿಗಳು ಮತ್ತು ಕಾರ್ಮಿಕರು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.2014, 2019ರ ನಂತರ ಈ ಬಾರಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಪದಗ್ರಹಣ ಮಾಡುತ್ತಿದ್ದಾರೆ. ಈ ಮೂಲಕ 1952, 1957 ಮತ್ತು 1962ರಲ್ಲಿ ಸತತ ಮೂರು ಸಾರ್ವತ್ರಿಕ ಚುನಾವಣೆ ಗೆದ್ದು ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ಅವರ ದಾಖಲೆಯನ್ನು ಮೋದಿ ಸರಿಗಟ್ಟುತ್ತಿದ್ದಾರೆ.
Last Updated : Jun 9, 2024, 9:58 PM IST